ಪುತ್ತೂರು: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮುಸ್ಲಿಂ ಯುವಕನೊಬ್ಬ ಇಂದು ಬೆಳಗ್ಗೆ ಪುತ್ತೂರಿನ ಸೇಡಿಯಾಪು ಸಮೀಪದ ಹನುಮಾಜೆಯ ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಬದ್ರುದ್ದೀನ್ ಡಿಕೆ(27) ಮೃತ ಯುವಕ. ಕಳೆದ ಮೂರು ದಿನಗಳಿಂದ ಬದ್ರುದ್ದೀನ್ನ ದ್ವಿಚಕ್ರ ವಾಹನ ಸೇಡಿಯಾಪಿನ ರಸ್ತೆ ಬದಿಯಲ್ಲಿತ್ತು. ಇಂದು ಹನುಮಾಜೆ ಗುಡ್ಡದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೊಳೆತ ಸ್ಥಿತಿಯಲ್ಲಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.
ಕಳೆದ ಎಂಟು ವರ್ಷಗಳಿಂದ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕ ನ.29ರಂದು ಎಂದಿನಂತೆ ಚಿಕನ್ ಸೆಂಟರ್ ಗೆ ಬಂದಿದ್ದ. ಬಳಿಕ ಮಾಲಕರಿಗೆ ತಿಳಿಸಿ ಹೊರ ಹೋಗಿದ್ದ ಬದ್ರುದ್ದೀನ್ ಮನೆಗೂ ತೆರಳದೆ, ಕೆಲಸಕ್ಕೂ ಬಾರದೆ ಕಾಣೆಯಾಗಿದ್ದ. ಇದಾದ ಮೂರು ದಿನಗಳ ಬಳಿಕ ಹನುಮಾಜೆ ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆತ್ಮಹತ್ಯೆಯ ಹಿಂದಿನ ಉದ್ದೇಶ ಇನ್ನೂ ನಿಗೂಢವಾಗಿದೆ.
ಘಟನಾ ಸ್ಥಳಕ್ಕೆ ನಗರ ಠಾಣಾ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನಾ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪತ್ನಿಯ ಕೊಲೆಗೈದು ಶವದೊಂದಿಗೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ನಲ್ಲಿ ವಿಕೃತಿ ಮೆರೆದ ಪತಿ!



















