ಮಂಗಳೂರು : ಪರಿಚಯಸ್ಥರನ್ನು ತಪಾಸಣೆಗೆ ಬೇಗ ಒಳಗೆ ಬಿಟ್ಟಿಲ್ಲವೆಂದು ಇಎನ್ಟಿ ಕ್ಲಿನಿಕ್ಗೆ ನುಗ್ಗಿ ಸಿಬ್ಬಂದಿ ಮೇಲೆ ದುಷ್ಕರ್ಮಿಯೋರ್ವ ಹಲ್ಲೆ ನಡೆಸಿರುವ ಘಟನೆ ಮಂಗಳೂರು ಜಿಲ್ಲೆ ಪುತ್ತೂರು ತಾಲೂಕಿನ ದರ್ಬೆಯಲ್ಲಿ ನಡೆದಿದೆ.
ಡಾ.ರಾಮಮೋಹನ ರಾವ್ರವರ ಕ್ಲಿನಿಕ್ಗೆ ನುಗ್ಗಿದ ಬಪ್ಪಳಿಗೆ ನಿವಾಸಿ ಇಬ್ರಾಹಿಂ, ಸಿಬ್ಬಂದಿ ಶ್ರೀಕಾಂತ್ ಮೇಲೆ ಹಲ್ಲೆ ನಡೆಸಿ ಗ್ಲಾಸ್ ಪುಡಿಪುಡಿಗೈದಿದ್ದಾನೆ. ಅಲ್ಲದೆ ಕ್ಲಿನಿಕ್ಗೆ ಬಂದಿದ್ದವರನ್ನು ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ.
ನ. 29ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕ್ಲಿನಿಕ್ಗೆ ನುಗ್ಗಿ ದಾಂಧಲೆ ನಡೆಸಿದ ಇಬ್ರಾಹಿಂ ವಿರುದ್ಧ ಕೇಸ್ ದಾಖಲಾಗಿದ್ದು, ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : BBK 12: ಗಿಲ್ಲಿಯ ಬೆನ್ನಿಗೆ ಚೂರಿ ಹಾಕಿ ನಾಮೀನೇಟ್ ಮಾಡಿದ ರಘು | ಬಾಹುಬಲಿ’ ಕಟ್ಟಪ್ಪ ಸೀನ್ ರಿ-ಕ್ರಿಯೇಟ್ ; ಪೋಸ್ಟರ್ ವೈರಲ್



















