ಮುಂಬಯಿ: ಭರ್ಜರಿ ಪ್ರದರ್ಶನ ಕಂಡು ಭಾರೀ ಹೆಸರು ಮಾಡಿರುವ ಪುಷ್ಪ 2 ಚಿತ್ರ ಈಗ ಮತ್ತೊಂದು ದಾಖಲೆಗೆ ಸಾಕ್ಷಿಯಾಗುತ್ತಿದೆ.
ಈಗಾಗಲೇ 1800 ಕೋಟಿ ರೂ. ಗೂ ಅಧಿಕ ಗಳಿಕೆ ಮಾಡಿರುವ ಪುಷ್ಪ 2 ಚಿತ್ರ, ಒಟಿಟಿಯಲ್ಲಿ ಸದ್ದು ಮಾಡುತ್ತಿದೆ. ಒಟಿಟಿಯಲ್ಲಿ ದೇಶ ಅಷ್ಟೇ ಅಲ್ಲ, ವಿದೇಶದಲ್ಲಿನ ಪ್ರೇಕ್ಷಕರು ಕೂಡ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿದೆ.
ಈಗ ಈ ಚಿತ್ರ ನೆಟ್ಫ್ಲಿಕ್ಸ್ ಗ್ಲೋಬಲ್ ಟಾಪ್- 10 ಟ್ರೆಂಡಿಂಗ್ ನಲ್ಲಿ ಸ್ಥಾನ ಪಡೆದಿದೆ. ಇದು ಚಿತ್ರತಂಡ ಹಾಗೂ ಅಲ್ಲು ಅರ್ಜುನ್ ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ. ಇಡೀ ಭಾರತವೂ ಹೆಮ್ಮೆ ಪಡುವಂತಾಗಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ನೋಡಿಲ್ಲದಿರುವ ಕೆಲವು ತುಣುಕುಗಳನ್ನು ಸೇರಿಸಿ ಒಟಿಟಿಯಲ್ಲಿ ‘ಪುಷ್ಪ 2’ ಬಿಡುಗಡೆ ಮಾಡಲಾಯಿತು. ಆ ಹೆಚ್ಚುವರಿ 23 ನಿಮಿಷಗಳ ದೃಶ್ಯಗಳನ್ನು ನೋಡಲು ಕೂಡ ಅನೇಕರು ಆಸಕ್ತಿ ತೋರಿಸುತ್ತಿದ್ದಾರೆ. ಈ ಕಾರಣದಿಂದ ಕೂಡ ಒಟಿಟಿಯಲ್ಲಿ ‘ಪುಷ್ಪ 2’ ಸಿನಿಮಾದ ವೀಕ್ಷಣೆ ಹೆಚ್ಚಾಗಿದೆ.
ಸುಕುಮಾರ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್, ಫಹಾದ್ ಪಾಸಿಲ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.