ನಟ ಅಲ್ಲು ಅರ್ಜುನ್ ಪುಷ್ಪ ಚಿತ್ರದ ಮೊದಲ ಭಾಗ ಭಾರೀ ಯಶಸ್ಸು ಕಂಡಿದೆ. ಹೀಗಾಗಿ ಅಭಿಮಾನಿಗಳು ‘ಪುಷ್ಪ 2’ (Pushpa 2) ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಆದರೆ, ಅವರ ಕಾಯುವಿಕೆಯ ಅವಧಿ ಇನ್ನೂ ಹೆಚ್ಚಾಗುತ್ತಿದ್ದು, ಅಭಿಮಾನಿಗಳು ಬೇಸರ ವ್ಯಕ್ತಪಡಿಸುವಂತಾಗಿದೆ.
ಈಗಾಗಲೇ ಚಿತ್ರದ ಟೀಸರ್ ಹಾಗೂ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿವೆ. ಆದರೆ, ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಮಾತ್ರ ನಿರಾಸೆಯಾಗಿದೆ. ಈಗಾಗಲೇ 2ನೇ ಭಾಗ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ, ಸದ್ಯದ ಮಾಹಿತಿಯಂತೆ ಡಿಸೆಂಬರ್ ನಲ್ಲಿಯೂ ಅದು ಬಿಡುಗಡೆಯಾಗುವುದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭಿಸಿದ್ದಾರೆ.
ಪುಷ್ಪ 2’ ಸಿನಿಮಾ ಇದೇ ಆಗಷ್ಟ್ 15ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಡಿಸೆಂಬರ್ ಗೆ ಮುಂದೂಡಲಾಗಿತ್ತು. ಆದರೆ, ಈಗ ಡಿಸೆಂಬರ್ ನಲ್ಲಿಯೂ ಬಿಡುಗಡೆಯಾಗುವುದಿಲ್ಲ ಎನ್ನಲಾಗುತ್ತಿದ್ದು, ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸರಿಯಾದ ಸಮಯದಲ್ಲಿ ಶೂಟಿಂಗ್ ಮಾಡುತ್ತಿಲ್ಲ ಎಂದು ಅಲ್ಲು ಅರ್ಜುನ್ (Allu Arjun) ಅಸಮಾಧಾನ ತೊಡಿಕೊಂಡಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ ಅಲ್ಲು ಅರ್ಜುನ್ ಗಡ್ಡವನ್ನು ಮತ್ತಷ್ಟು ಟ್ರಿಮ್ ಮಾಡಿಕೊಂಡಿದ್ದಾರಂತೆ. ಸದ್ಯ ಕುಟುಂಬದ ಜೊತೆ ಯೂರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ನಿರ್ದೇಶಕ ಸುಕುಮಾರ್ ಕೂಡ ಅಮೆರಿಕಾಗೆ ಹೋಗಿದ್ದಾರೆ. ಹೀಗಾಗಿ ಚಿತ್ರೀಕರಣ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ. ಡಾಲಿ ಧನಂಜಯ, ಅನಸೂಯ, ಫಹಾದ್ ಪಾಸಿಲ್ ಸೇರಿದಂತೆ ಅನೇಕರಿದ್ದಾರೆ.
