ಅರ್ಜುನ್ (Allu Arjun) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ‘ಪುಷ್ಪ 2’ (Pushpa 2) ಭಾರೀ ಕಲೆಕ್ಷನ್ ನತ್ತ ಮುನ್ನುಗ್ಗುತ್ತಿದೆ.
ಸದ್ಯ ಸಾವಿರ ಕೋಟಿ ರೂ. ಕ್ಲಬ್ ಸೇರುವ ಹಾದಿಯಲ್ಲಿ ಈಗ ಈ ಚಿತ್ರ ಇದೆ. ಈ ಚಿತ್ರ ಬಿಡುಗಡೆಯಾದ 5 ದಿನಗಳಲ್ಲಿ 922 ಕೋಟಿ ರೂ. ಗಳಿಕೆ ಮಾಡಿದೆ. ಈ ಕುರಿತು ಚಿತ್ರ ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಹೇಳಿದೆ.
ಬಹುಭಾಷೆಗಳಲ್ಲಿ ‘ಪುಷ್ಪ 2’ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ. ಈ ಚಿತ್ರ ವಿಶ್ವಾದ್ಯಂತ 922 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಿರ್ಮಾಣ ಸಂಸ್ಥೆ ಹೇಳಿದೆ.
ಅಲ್ಲು ಅರ್ಜುನ್ ನಟನೆ ಮತ್ತು ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ ಫ್ಯಾನ್ಸ್‌ಗೆ ಇಷ್ಟವಾಗಿದೆ. ಶ್ರೀವಲ್ಲಿಯಾಗಿ ರಶ್ಮಿಕಾ ನಟನೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಶ್ರೀಲೀಲಾ ಕಿಸ್ಸಿಕ್ ಸಾಂಗ್, ಫಹಾದ್ ಫಾಸಿಲ್ ನಟನೆ, ಪುಷ್ಪರಾಜ್ ಜೊತೆಗಿನ ತಾರಕ್ ಪೊನ್ನಪ್ಪ ಸಂಘರ್ಷ ಸಿನಿಮಾ ಪ್ರೀಯರನ್ನು ಕೆಣಕಿವೆ.


















