ಚಿತ್ರದುರ್ಗ: ಸಚಿವ ಶಿವರಾಜ್ ತಂಗಡಗಿ ವಿರುದ್ಧ ಗಾಣಿಗ ಮಠದ ಪೂರ್ಣಾನಂದಪುರಿ ಶ್ರೀ ಆರೋಪಕ್ಕೆ ಇಮ್ಮಡಿ ಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಶಿವರಾಜ್ ತಂಗಡಗಿಗೆ ಗೊತ್ತು. ಪೂರ್ಣಾನಂದಪುರಿ ಸ್ವಾಮಿಜಿ ಈ ಹಿಂದೆ ಸಚಿವರಾಗಿದ್ದವರು. ಅವರಿಗೆ ಅನುದಾನದ ಕಡತಗಳು ಹೇಗೆ ಅಧಿಕಾರಿಗಳ ಬಳಿ ಇರುತ್ತೆ ಅಂತ ಗೊತ್ತಿದೆ. ಹಿಂದಿನ ಸರ್ಕಾರ ನೀಡಿದ ಅನುದಾನ, ಹೊಸ ಸರ್ಕಾರ ನೀಡುವುದು ಅಪರೂಪ ಎಂದು ಹೇಳಿದ್ದಾರೆ.
ಭೋವಿ ಗುರುಪೀಠಕ್ಕೆ ಬಸವರಾಜ ಬೊಮ್ಮಾಯಿ ಘೋಷಿಸಿದ ಅನುದಾನ ಇನ್ನೂ ಬಂದಿಲ್ಲ. ಸರ್ಕಾರದಿಂದ ಅನಿದಾನ ಪಡೆಯಲು ಒಂದು ಕ್ರಮ ಇದೆ. 1 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಬೇಕಾದರೆ ಕಡತ ಸಿಎಂ ಬಳಿ ಹೋಗುತ್ತೆ. ಸಿಎಂ ಖುದ್ದು ಆ ಕಡತಗಳನ್ನು ಪರಿಶೀಲನೆ ಮಾಡುತ್ತಾರೆ. ಗ್ಯಾರಂಟಿ ಸರ್ಕಾರದಲ್ಲಿ ಸಿಎಂ ಕಡತ ಪರಿಶೀಲನೆ ಮಾಡುವುದರಿಂದ ಭ್ರಷ್ಟಾಚಾರ ಸಾಧ್ಯವಿಲ್ಲ. ತಂಗಡಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸ್ಪಂದಿಸುವ ವ್ಯಕ್ತಿ. ಶ್ರೀಗಳು ವೃಥಾ ಆರೋಪ ಮಾಡುವುದು ಸರಿಯಲ್ಲ. ಕ್ರಮಬದ್ಧವಾಗಿ ಮಠಕ್ಕೆ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿ. ಪೂರ್ಣಾನಂದಪುರಿ ಸ್ವಾಮಿಜಿಗೆ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಮನವಿ ಮಾಡಿದ್ದಾರೆ.