ಉಡುಪಿ : ಯುಟ್ಯೂಬರ್ ಮನಾಫ್ ಗೆ ಸೂಕ್ತ ಶಿಕ್ಷೆಯಾಗಬೇಕು. ಧರ್ಮಸ್ಥಳ, ಕೊಡಚಾದ್ರಿ, ಕೃಷ್ಣ ಮಠದ ಬಗ್ಗೆ ಅಪಪ್ರಚಾರ ಮಾಡಿದ್ದಾನೆ ಎಂದು ಶ್ರೀಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಶ್ರೀಕುಮಾರ್, ಉಡುಪಿ ಕೊಲ್ಲೂರಲ್ಲಿ ನಿರಂತರ ಅತ್ಯಾಚಾರವಾಗಿತ್ತಿದೆ ಎಂದು ಅಪಪ್ರಚಾರ ಮಾಡಿದ್ದಾನೆ. ಇದರಿಂದ ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ಈ ಹಿನ್ನಲೆ ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿರುವುದಾಗಿ ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಈ ಬಗ್ಗೆ ಬಹಳ ಚರ್ಚೆ ನಡೆದಿದ್ದು, ಅಫ್ಘಾನ್, ಸಿರಿಯಾದ ರೀತಿಯಲ್ಲಿ ಕರಾವಳಿ ಆಗಿಹೋಯ್ತಾ? ಮುನಾಫ್ ಮತದಲ್ಲಿ ಆಕ್ಷನ್ ಕಮಿಟಿ ಮಾಡುವ ಬಹಳ ವಿಷಯ ಇದೆ. ಮದರಸಾದಲ್ಲಿ ಅತ್ಯಾಚಾರಗಳು ಬಹಳ ನಡೆಯುತ್ತದೆ. ಸಣ್ಣಮಕ್ಕಳ ಮೇಲೆ ಅತ್ಯಾಚಾರ ಘಟನೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.
ಮನಾಫ್ ಹಿಂದೆ ಯಾರಿದ್ದಾರೆ? ಫಂಡಿಂಗ್ ಮಾಡಿದವರು ಯಾರು? ಮನಾಫ್ ನ ಚಾನೆಲ್ ನಲ್ಲಿ ಅವನ ಮತದವರೇ ಹೆಚ್ಚು ಬೆಂಬಲಿಸುತ್ತಾರೆ. ತನ್ನ ಜೊತೆ ಬಹಳ ಜನ ಇದ್ದಾರೆ ಎಂದು ಮನಾಫ್ ಹೇಳಿದ್ದ, ಧರ್ಮಸ್ಥಳ ವಿಚಾರದಲ್ಲಿ ಇದು ತನಿಖೆ ನಡೆಯುತ್ತಿದೆ. ನಾನು 16 ವರ್ಷದಿಂದ ಉಡುಪಿಯಲ್ಲಿ ನೆಲೆಸಿದ್ದೇನೆ. ಕೇರಳ ಸಮಾಜಂ ಯಾವುದನ್ನೂ ನಂಬೂದಿಲ್ಲ, ಕೇರಳದಲ್ಲಿ ಕೂಡಾ ಇದನ್ನು ಈಗ ನಂಬುವವರಿಲ್ಲ. ಮುನಾಫ್ ನ ಸಂಪೂರ್ಣ ತನಿಖೆ ಆಗಬೇಕು. ಉಡುಪಿ ಪೊಲೀಸರು ಮುನಾಫ್ ನನ್ನು ಕರೆಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.



















