ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಇಬ್ಬರು ಹೆಣ್ಣು ಮಕ್ಕಳಿಗೆ ವಿನಯ್ ರಾಜ್ ಕುಮಾರ್ ಅಂದ್ರೆ ಬಹಳ ಇಷ್ಟ. ಅಣ್ಣನ ಜೊತೆಗೆ ಇರುವ ಫೋಟೋ ಒಂದನ್ನು ಪುನೀತ್ ಮಗಳು ಧೃತಿ ಶೇರ್ ಮಾಡಿಕೊಂಡಿದ್ದಾರೆ.

ಅಪ್ಪು ದೊಡ್ಡ ಮಗಳು ಧೃತಿ ಅಮೆರಿಕದ ನ್ಯೂಯಾರ್ಕ್ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈಗ ಅವರು ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ‘ದಿ ನ್ಯೂ ಸ್ಕೂಲ್’ ಹೆಸರಿನ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಇದೀಗ ಅವರು ಇಲ್ಲಿಸ್ಟ್ರೇಟರ್ ಹಾಗೂ ಡಿಸೈನರ್ ಕೋರ್ಸ್ ಮೇಲೆ ಪದವಿ ಪಡೆದಿದ್ದಾರೆ. ಇನ್ನು ಚಿಕ್ಕಪ್ಪ ಪುನೀತ್ ರಾಜ್ ಕುಮಾರ್ ಅಂದ್ರೆ ವಿನಯ್ ರಾಜ್ ಕುಮಾರ್ ಗೆ ಬಹಳ ಇಷ್ಟ. ಇದೀಗ ಅಣ್ಣನ ಜೊತೆಗೆ ಪುನೀತ್ ಮಕ್ಕಳು ಡಿನ್ನರ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.