ಸದ್ಯ ರಾಜ್ಯದಲ್ಲಿ ಹೃದಯಗಳು ಹಠಾತ್ತನೆ ನಿಲ್ಲುತಿದ್ದು ಇದೇ ಸಮಯದಲ್ಲಿ ರಾಜ್ಯ ಸರ್ಕಾರದ ಯೋಜನೆಯೊಂದು ಸುದ್ದಿಯಲ್ಲಿದೆ.
ಏನಿದು ಯೋಜನೆ? ಯಾವ ಚಿಕಿತ್ಸೆಗಳು ಲಭ್ಯವಿದೆ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ…
2020ರಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿಯ ನಂತರ ದೇಶದಲ್ಲಿ ಹದಿ ಹರೆಯದ ಯುವಕರಿಗೆ ಹಠಾತ್ತನೆ ಹೃದಯಘಾತಗಳು ಸಂಭವಿಸಿದ ಪರಿಣಾಮ 2023ರಲ್ಲಿ ಇದೇ ಹೃದಯಘಾತದಿಂದ ಕೋಟ್ಯಂತರ ಅಭಿಮಾನಿಗಳನ್ನು ಕಳೆದುಕೊಂಡ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಸದ್ಯ ಈ ಯೋಜನೆ ಕರ್ನಾಟಕದಲ್ಲಿ ಸುದ್ದಿಯಲ್ಲಿದೆ.
ಹೃದಯಘಾತ ಸಂದರ್ಭದಲ್ಲಿ ಗೋಲ್ಡನ್ ಅವರ್ ತುಂಬಾ ಮುಖ್ಯ. ಹೃದಯಘಾತ ಲಕ್ಷಣಗಳು ಪ್ರಾರಂಭವಾದ ಮೊದಲ 60 ನಿಮಿಷವನ್ನು ಗೋಲ್ಡನ್ ಅವರ್ ಎನ್ನುತ್ತಾರೆ. ಈ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆತರೆ, ವ್ಯಕ್ತಿ ಉಳಿಯುವ ಸಾಧ್ಯತೆ ಶೇ.80 ಸಾಧ್ಯವಿರುತ್ತದೆ. ಈ ಗೋಲ್ಡನ್ ಸಮಯದಲ್ಲೇ ಚಿಕಿತ್ಸೆ ನೀಡುವುದು ಈ ಯೋಜನೆಯ ಪ್ರಮುಖ ಗುರಿಯಾಗಿರುತ್ತದೆ.
ಎದೆ ನೋವು ಕಾಣಿಸಿಕೊಂಡ ವ್ಯಕ್ತಿ ತಮ್ಮ ಹತ್ತಿರದ ಸ್ಪೋಕ್ ಕೇಂದ್ರಗಳಿಗೆ(ತಾಲ್ಲೂಕು ಆಸ್ಪತ್ರೆಗೆ) ಭೇಟಿ ನೀಡಿದರೆ ಈ ಯೋಜನೆ ಅನ್ವಯ ತಕ್ಷಣ ಇಸಿಜಿ ಮಾಡಲಾಗುತ್ತದೆ. ಜೊತೆಗೆ ತಂತ್ರಜ್ಞಾನ ಬಳಸಿ ಅವರ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ಪರಿಸ್ಥಿತಿ ತೀರಾ ಹದಗೆಟ್ಟಿದ್ದರೆ, ತಕ್ಷಣ ತೆನೆಕ್ಟೆಪ್ಲೇಸ್ ಇಂಜೆಕ್ಷನ್ ನೀಡಲಾಗುತ್ತದೆ. ಇದು ಹಠಾತ್ ಹೃದಯಘಾತ ಆಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಖಾಸಗಿಯಲ್ಲಿ ಈ ಇಂಜೆಕ್ಷನ್ ಗೆ ಸುಮಾರು 30 ಸಾವಿರ. 000 ಸಾವಿರವಿದ್ದು ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ ಯೋಜನೆಯಡಿಯಲ್ಲಿ ಉಚಿತವಾಗಿ ನೀಡಲಾಗುತ್ತದೆ. ಒಟ್ಟಿನಲ್ಲಿ ಜೀವಂತವಿದ್ದಾಗ ಜನಪರ ಕಾರ್ಯಗಳನ್ನು ಮಾಡಿರುವ ಅಪ್ಪು, ಇದೀಗ ಅವರ ಹೆಸರಿನ ಯೋಜನೆಯೊಂದು ಅದೆಷ್ಟೋ ಜನರ ಪ್ರಾಣವನ್ನು ಉಳಿಸುತ್ತಿದೆ.


















