ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ಈಗಾಗಲೇ 2 ವರ್ಷ ಕಳೆದಿವೆ. ಆದರೂ ಅವರು ಕನ್ನಡದ ಮನಸ್ಸುಗಳಲ್ಲಿ ಅಜರಾಮರವಾಗಿದ್ದಾರೆ. ಈ ಮಧ್ಯೆ ಆಧ್ಯಾತ್ಮಿಕ ಗುರು ಡಾ. ರಾಮಚಂದ್ರ ಗುರೂಜಿ ಅವರು ಪುನೀತ್ ಆತ್ಮದೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಅಭಿಮಾನಿಗಳು ಕುತೂಹಲದಿಂದ ಕೇಳುತ್ತಿದ್ದಾರೆ.
ಇದನ್ನು ಕೆಲವರು ನಂಬುತ್ತಾರೆ. ಕೆಲವರು ನಂಬುವುದಿಲ್ಲ. ಆದರೆ, ಇದು ಅವರವರ ನಂಬಿಕೆಗೆ ಬಿಟ್ಟಿದ್ದು. ನಾವು ಇಲ್ಲಿ ಗುರೂಜಿ ಹೇಳಿರುವುದನ್ನು ಹೇಳಿದ್ದೇವೆ. ಇದು ಕೂಡ ನಂಬುವವರಿಗಾಗಿ ಮಾತ್ರ. ಖ್ಯಾತ ಆಧ್ಯಾತ್ಮಿಕ ಗುರುಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಡಾ. ರಾಮಚಂದ್ರ ಗುರೂಜಿ ಅವರು ಈ ಕುರಿತು ರಾಜೇಶ್ ಗೌಡ ಅವರ ಪಾಡ್ ಕಾಸ್ಟ್ ನಲ್ಲಿ ಆತ್ಮದ ಕುರಿತು ಮಾತನಾಡಿದ್ದಾರೆ. ಸಾವಿನ ನಂತರ ದೇಹದಿಂದ ಹೊರಬಂದಿರುವುದು ಆತ್ಮಕ್ಕೆ ಎಲ್ಲಾ ತಿಳಿಯುತ್ತದೆ. ತಂದೆ ತಾಯಿ ಕುಟುಂಬದವರು ಅಳುವುದು ತಿಳಿಯುತ್ತದೆ. ಹೀಗಾಗಿ ಆತ್ಮಕ್ಕೆ ತಿಳಿಯಲಿ ಎಂದೇ ನಾವು ಸಂಸ್ಕಾರಗಳನ್ನು ಮಾಡುತ್ತೇವೆ. ಆತ್ಮದ ಸಮಯ ಮುಗಿದಿದೆ. ಬಂದ ಕೆಲಸ ಮುಗಿದಿದೆ. ನೀನು ಇನ್ನೊಂದು ದೇಹಕ್ಕೆ ಹೋಗಬೇಕು ಎಂದು ಹೇಳಲು ನಾವು ಸಂಸ್ಕಾರಗಳನ್ನು ಮಾಡುತ್ತೇವೆ ಎಂದಿದ್ದಾರೆ.
ಸತ್ತ ವ್ಯಕ್ತಿಯ ಆತ್ಮದ ಜೊತೆ ಸಂಭಾಷಣೆ ಮಾಡಲು ಸಾಧ್ಯವಿದೆ. ಆತ್ಮ ಸಂಭಾಷಣೆ ಅದೊಂದು ವಿದ್ಯೆ. ಎಂದಿರುವ ಗುರುಜಿ, ಅಪ್ಪು ಆತ್ಮದ ಜೊತೆಗೆ ಸತ್ತ ಕೆಲವೇ ದಿನಗಳಲ್ಲಿ ಮಾತನಾಡಿದ್ದೇನೆ ಎಂದಿದ್ದಾರೆ. ಅಪ್ಪು ಅವರೇ ನಿಮ್ಮ ಸಾವಿನ ಬಗ್ಗೆ ಅನೇಕ ಅಪೋಹಳಿವೆ ಇದು ನಿಜನಾ? ಅಂದಾಗ, ಇಲ್ಲ ನಾನು ಹೃದಯ ಸಂಬಂಧಿ ಖಾಯಿಲೆಯಿಂದ ಸಾವನ್ನಪ್ಪಿದ್ದೇನೆ ಎಂದಿದ್ದಾರೆ. ದೇಹದಿಂದ ಬಿಟ್ಟು ಹೋಗಿ ಈಗ ಎಲ್ಲಿದ್ದೀರಿ ಎಂಬ ಪ್ರಶ್ನೆಗೆ ಅಪ್ಪ-ಅಮ್ಮನ ಹುಡುಕಾಟದಲ್ಲಿ ಇದ್ದೇನೆ ಎಂದಿದ್ದಾರೆ. ಮತ್ತೆ ಹುಟ್ಟಿ ಬರ್ತಿರಾ ಅಂದಾಗ, ಅದರ ಬಗ್ಗೆ ಯೋಚನೆ ಮಾಡಿಲ್ಲ. ಒಂದೊಮ್ಮೆ ಹುಟ್ಟಿಬರುವುದಾದರೆ ನಾನು ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆ ಅಂದಿದ್ದಾರೆ ಎಂದು ಗುರೂಜಿ ಹೇಳಿದ್ದಾರೆ. ನಾವು ನಮ್ಮ ಸಂಶೋಧನೆಗಾಗಿ. ಖಾಸಗಿ ಭಂಡಾರಕ್ಕಾಗಿ ಮಾಡಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.