ಅಪ್ಪು ನನಗೆ ಸ್ಪೂರ್ತಿ. ಅವರ ವ್ಯಕ್ತಿತ್ವ ನನಗೆ ಪ್ರೇರಣೆ ಎಂದು ಬಾಲಿವುಡ್ ನ ಖ್ಯಾತ ನಟಿ ಹೇಳಿದ್ದಾರೆ.
ಬಾಲಿವುಡ್ ನಟಿ ಅದಾ ಶರ್ಮಾ ಅವರು ಕರ್ನಾಟಕ ರತ್ನವನ್ನು ಹಾಡಿ ಹೊಗಳಿದ್ದಾರೆ. ಅದಾ ಶರ್ಮಾ ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಅವರು ಬಾಲಿವುಡ್ ಅಂಗಳದಲ್ಲೇ ಸದ್ದು ಮಾಡಿರುವುದು. ಸನ್ ಆಫ್ ಸತ್ಯಮೂರ್ತಿ, ದಿ ಕೇರಳ ಸ್ಟೋರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರು ಮಾರು ಹೋಗಿದ್ದು, ಮಾತ್ರ ಪುನೀತ್ ರಾಜಕುಮಾರ್ ವ್ಯಕ್ತಿತ್ವಕ್ಕೆ.
ಪುನೀತ್ ರಾಜಕುಮಾರ್ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಏರ್ ಪೋರ್ಟ್ ನಿಂದ ನಾನು ಹೋಟೆಲ್ ಗೆ ಹೋಗುವಷ್ಟರಲ್ಲಿ ಸಾಕಷ್ಟು ಹೋಲ್ಡಿಂಗ್ಸ್ ಗಳಲ್ಲಿ ಪುನೀತ್ ಕಾಣಿಸಿಕೊಂಡರು. ಸೆಟ್ ಹತ್ತಿರವೂ ಜನ ಅವರಿಗಾಗಿ ಕಾಯುತ್ತಿದ್ದರು. ಎಲ್ಲರನ್ನೂ ಅವರು ಶಾಂತವಾಗಿ ಭೇಟಿ ಮಾಡಿದರು. ಎಲ್ಲರೂ ನನಗೆ ನೀನು ಅದೃಷ್ಟವಂತೆ ದೊಡ್ಡ ಸ್ಟಾರ್ ಜೊತೆ ನಟಿಸುತ್ತಿದ್ದೀರ ಎನ್ನುತ್ತಿದ್ದರು’ ಎಂದು ಅದಾ ಶರ್ಮಾ ನೆನಪು ನೆನಪಿಸಿಕೊಂಡಿದ್ದಾರೆ.
ಪುನೀತ್ ಅವರೊಟ್ಟಿಗೆ ನಟಿಸುವಾಗ ನಾನು ಬಹಳ ನರ್ವಸ್ ಆಗಿದ್ದೆ. ಆದರೆ ಪುನೀತ್ ತಮ್ಮ ಸ್ಟಾರ್ಡಮ್ಗೆ ವಿರುದ್ಧವಾಗಿ ಬಹಳ ವಿನಯದಿಂದ, ಫ್ರೆಂಡ್ಲಿಯಾಗಿ ನಡೆದುಕೊಂಡರು. ನಿಗದಿತ ಸಮಯಕ್ಕೆ ಸೆಟ್ಗೆ ಬರುತ್ತಿದ್ದರು. ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿದ್ದರೂ ರಿಹರ್ಸಲ್ ತಪ್ಪಿಸುತ್ತಿರಲಿಲ್ಲ. ಶೂಟ್ ಮಾಡುವಾಗ 45 ಡಿಗ್ರಿ ಬಿಸಿಲು ಇರುತ್ತಿತ್ತು, ಆದರೆ ಸೆಟ್ನಲ್ಲಿ ಎನರ್ಜಿ ಡ್ರಾಪ್ ಆಗದಂತೆ ನೋಡಿಕೊಳ್ಳುತ್ತಿದ್ದರು. ಎಲ್ಲರೊಂದಿಗೆ ಉತ್ತಮವಾಗಿ ಮಾತನಾಡುತ್ತಿದ್ದರು. ಸಹನಟರನ್ನು ಪ್ರೀತಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
‘ಅಂದು ಪುನೀತ್ ಅನ್ನು ನೋಡಿದಾಗ ಅನಿಸಿದ್ದು, ನಾನು ಎಂದಾದರೂ ಪುನೀತ್ ಅವರಂತೆ ಸ್ಟಾರ್ ಆದರೆ, ನಾನೂ ಸಹ ಅವರಂತೆ ನಡೆದುಕೊಳ್ಳಬೇಕು. ಅವರಂತೆ ವಿನಯದಿಂದ ಇರಬೇಕು. ಎಲ್ಲರನ್ನೂ ಪ್ರೀತಿಸಬೇಕು ಎಂದು ಶರ್ಮಾ ತಮ್ಮ ಮನದಾಳದ ಮಾತು ಹೇಳಿದ್ದಾರೆ. ಅಲ್ಲದೇ, ಪುನೀತ್ ಅವರು ಎಲ್ಲಿಯೇ ಇರಲಿ ಅವರಿಗೆ ನನ್ನ ಧನ್ಯವಾದ’ ಎಂದಿದ್ದಾರೆ.