ಮಹಾರಾಷ್ಟ್ರದ ಪುಣೆಯಲ್ಲಿ 26 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ 37 ವರ್ಷದ ದತ್ತಾತ್ರೇಯ ಗಾಡೆ ಮೂರು ಬಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದರೂ ಹಗ್ಗವು ತುಂಡಾಗಿತ್ತು ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.
75 ಗಂಟೆಗಳ ಕಾಲ ಪೊಲೀಸರು ನಡೆಸಿದ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಗಾಡೆ ವಶಕ್ಕೆ ಸಿಕ್ಕಿದ್ದ. ಇದೀಗ ಆತ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯತ್ನಿಸಿದ್ದ ವಿಚಾರ ಬಹಿರಂಗವಾಗಿದೆ.
“ನಮ್ಮ ತಂಡ ಆರಫಿ ಗಾಡೆಯನ್ನು ಬಂಧಿಸಿದಾಗ, ಅವರ ಕುತ್ತಿಗೆ ಮೇಲೆ ಹಗ್ಗದ ಗುರುತುಗಳು ಕಂಡುಬಂದವು,” ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮ ತಂಡವು ಈ ಗುರುತುಗಳ ಬಗ್ಗೆ ಕೇಳಿದಾಗ, ಗುರುವಾರ ರಾತ್ರಿ, ಎಳ್ಳಿನ ಹೊಲದಲ್ಲಿ ಮರಕ್ಕೆ ನೇಣುಹಾಕಿಕೊಳ್ಳುವುದಕ್ಕೆ ಯತ್ನಿಸಿದ್ದೆ ಎಂಬುದಾಗಿ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗಾಡೆಯನ್ನು ಇದೀಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರು 14 ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಅತ್ಯಾಚಾರವೋ ಅಥವಾ ಪರಸ್ಪರ ಒಪ್ಪಂದದ ಸಂಬಂಧವೋ?
ಗಾಡೆ ಮೇಲೆ ಪುಣೆ ನಗರದ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ರಾಜ್ಯ ಸಾರಿಗೆ ಬಸ್‌ನೊಳಗೆ ಮಹಿಳೆಯನ್ನು ಅತ್ಯಾಚಾರ ಮಾಡಿದ ಆರೋಪವಿದೆ. ಆದರೆ ಆರೋಪಿಯ ವಕೀಲರು ಇದನ್ನು ಅತ್ಯಾಚಾರವಲ್ಲ, ಪರಸ್ಪರ ಒಪ್ಪಂದದ ಸಂಬಂಧ ಎಂದು ವಾದಿಸಿದ್ದಾರೆ. ಪುಣೆ ಪೊಲೀಸ್ ಅಧಿಕಾರಿಗಳಿಗೆ ಮಾರ್ಚ್ 12ರವರೆಗೆ ಗಾಡೆಯನ್ನು ಕಸ್ಟಡಿಯಲ್ಲಿ ಇರಿಸಲು ನ್ಯಾಯಾಲಯ ಅನುಮತಿ ನೀಡಿದೆ.
ಆಶ್ಚರ್ಯಕರ ಬಂಧನ
ಆರೋಪಿ ಗಾಡೆಯ ಬಂಧನಕ್ಕೆ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಗಾಡೆ ಎಳ್ಳು ಹೊಲದಲ್ಲಿ ಅಡಗಿ ಕುಳಿತಿದ್ದ ಕಾರಣ, ಪೊಲೀಸರು ಆ ಪ್ರದೇಶವನ್ನು ಸಂಪೂರ್ಣವಾಗಿ ಮುತ್ತಿಗೆ ಆವರಿಸಿಕೊಂಡಿದ್ದರು.
“ಶುಕ್ರವಾರ ಬೆಳಗಿನ ಜಾವ 1.30ಕ್ಕೆ ನಮ್ಮ ತಂಡ ಗಾಡೆ ಅವರನ್ನು ಬಂಧಿಸಿತು. ಅದಕ್ಕಿಂತ ಮೊದಲ ದಿನ ರಾತ್ರಿ 10.30ಕ್ಕೆ ಹೊಲದಿಂದ ಬಂದಿದ್ದ. ಆತನಿಗೆ ಬಾಯಾರಿಕೆಯಾಗಿತ್ತು.
ಆತ ಹೊಲದ ಸಮೀಪದ ಮನೆಯೊಂದಕ್ಕೆ ಹೋಗಿ ನೀರು ಬೇಕು” ಎಂದು ಮನವಿ ಮಾಡಿದ್ದ . ಆ ಮನೆಯವರು ನೀರು ಕೊಟ್ಟು ಕಳುಹಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಆತ ಓಡಿ ಹೋಗಲು ಯತ್ನಿಸಿದ್ದ. ಸ್ಥಳೀಯರುಹಾಗೂ ಪೊಲೀಸರು ಹಿಡಿದಿದ್ದಾರೆ.
“ವಿಚಾರಣೆಯಲ್ಲಿ, ಗಾಡೆ .ಎರಡು ದಿನಗಳ ಕಾಲ ಹೊಲದಲ್ಲಿ ಎಳ್ಳು ಮತ್ತು ಟೊಮೇಟೊ ತಿಂದು ಬದುಕಿದ್ದೆ ಎಂದು ಹೇಳಿದ್ದಾನೆ. ನೀರು ಸಿಗದೆ ಬಹಳ ಹಿಂಸೆ ಅನುಭವಿಸಿದ್ದ. ದಾಹದ ಕಾರಣ, ಆತ ಹೊಲದಿಂದ ಹೊರಗೆ ಬಂದಿದ್ದ,” ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಹೇಳಿದ್ದೇನು?
ಗಾಡೆ ಹಲವು ಪ್ರಕರಣಗಳಲ್ಲಿ ಜೈಲು ಸೇರಿ ಹೊರಗೆ ಬಂದಿದ್ದವ. ಇದೀಗ ಆತ ಪುಣೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ರಾಜ್ಯ ಸಾರಿಗೆ ಬಸ್‌ನೊಳಗೆ ಮಹಿಳೆಯನ್ನು ಅತ್ಯಾಚಾರ ಮಾಡಿದ್ದ.
ಈ ಘಟನೆ ಬೆಳಿಗ್ಗೆ 5.45ಕ್ಕೆ ನಡೆದಿದೆ. ಯುವತಿ ಬಸ್‌ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಗಾಡೆ ಆಕೆಯೊಂದಿಗೆ ಮಾತು ಆರಂಭಿಸಿದ್ದ. “ಅಕ್ಕ, ನಿನ್ನ ಬಸ್ ಇನ್ನೊಂದು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದೆ” ಎಂದು ಹಾದಿ ತಪ್ಪಿಸಿದ್ದ. ಆಕೆ ಬಸ್ನ ಒಳಗೆ ಹೋಗುತ್ತಿದ್ದಂತೆ ಅತ್ಯಾಚಾರ ಮಾಡಿದ್ದ. ತಪ್ಪಿಸಿಕೊಂಡು ಹೊರ ಬಂದಿದ್ದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.