ಬೆಂಗಳೂರು : ಪುಡಿ ರೌಡಿಗಳಿಂದ ಏರಿಯಾದಲ್ಲಿ ದಾಂಧಲೆ ಹೆಚ್ಚಾಗಿದ್ದು, ಮಧ್ಯರಾತ್ರಿಯಲ್ಲಿ ಲಾಂಗು ಮಚ್ಚುಗಳಿಂದ ಸಾರ್ವಜನಿಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಈ ಘಟನೆ ತಡರಾತ್ರಿ ಹೆಣ್ಣೂರು ಬಡಾವಣೆಯಲ್ಲಿ ನಡೆದಿದೆ. ಇದೀಗ ಐವರಲ್ಲಿ ಮೂವರು ಕಿಡಿಗೇಡಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಅವರು ಸರ್ವಜ್ಞನಗರ ನಿವಾಸಿಗಳು ಎಂದು ತಿಳಿದುಬಂದಿದೆ. ಅಮೀನ್ ಷರೀಫ್, ಸೈಯದ್ ಅರ್ಬಾಸ್, ಶೀದ್ ಖಾದರ್ ಮೂವರು ಬಂಧಿತ ಆರೋಪಿಗಳಾಗಿದ್ದಾರೆ.
ತನಿಖೆ ವೇಳೆ ಆರೋಪಿಗಳು ಏರಿಯಾದಲ್ಲಿ ಹವಾ ಮೇಂಟೇಂನ್ ಮಾಡಲು ಲಾಂಗ್ ಹಿಡಿದು ಓಡಾಡುತ್ತಿದ್ದೇವು ಎಂದು ಹೇಳಿದ್ದಾರೆ. ಕಿರಣ್ ಎಂಬುವವರು ದೂರು ನೀಡಿದ್ದು, ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.