ಬೆಂಗಳೂರು:.ಹೀರೋ ಆಗಲು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದ ಸೈಕೋ, ಹುಡುಗಿ ಆದ ಕಥೆ ಇದು. ದೇವರು ಸೈಕೋನ ಹಣೆ ಬರಹವನ್ನೇ ಢಿಪರೆಂಟ್ ಆಗಿ ಬರೆದಿರುತ್ತಾನೆ. ಆದರೆ, ಹೀರೋ ಆಗೋಕೆ ಬಂದವನು ಹೀರೋಯಿನ್ ಆಗಿ ಬದಲಾಗಿ ಬಿಡುತ್ತಾನೆ.

ಸೈಕೋ ಜಯಂತ್ ಅಲಿಯಾಸ್ ದೀಪಕ್ ಸುಬ್ರಹ್ಮಣ್ಯ ಅವರ ಕಥೆ ಇದು. ಹುಡುಗಿ ಅಂತಾ ಡ್ರಾಮ ಮಾಡಿ ಎಲ್ಲರನ್ನೂ ಹೆಂಗೆ ಯಾಮಾರಿಸಿದ? ನಂಬರ್ ಓನ್ ಹೀರೋಯಿನ್ ಹೇಗೆ ಆದ? ಇವನು ಹುಡುಗಿ ಅಂತ ತಿಳಿದು ಲವ್ ಮಾಡಿ ಎಷ್ಟು ಜನ ಮೆಂಟಲ್ ಆದರು? ಎಂಬೆಲ್ಲ ಕಚಗುಳಿಯ ದೃಶ್ಯಗಳು, ಬಿದ್ದು ಬಿದ್ದು ನಗುವ ಸನ್ನಿವೇಶಗಳು ಈ ಕಥೆಯಲ್ಲಿ ಸಿಗುತ್ತವೆ.

ಈ ಚಿತ್ರ ಫೆಬ್ರವರಿ 7ಕ್ಕೆ ಮಿಸ್ಟರ್ ರಾಣಿ ಎಂಬ ಹೆಸರಿನಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾಗೆ ಕಟ್ ಹೇಳಿದ್ದ ಮಧುಚಂದ್ರ, ಈ ಸಿನಿಮಾಕ್ಕಾಗಿ ಕ್ಯಾಪ್ ತೊಟ್ಟಿದ್ದಾರೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಮಂಜ, ಈ ಸಿನಿಮಾದಲ್ಲಿ ಸಾಕಷ್ಟು ಮಜಾ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ರಾಣಿ ನಾಯಕಿ ನಟಿ ಆದರೆ, ಟ್ರೈಲರ್ ನಲ್ಲಿರುವ ಮತ್ತೋರ್ವ ಹೀರೋಯಿನ್ ಪಾರ್ವತಿ ನಾಯರ್ ಯಾವ ರೀತಿ ಟ್ವಿಸ್ಟ್ ನೀಡುತ್ತಾರೆ ಎಂಬುವುದನ್ನು ನೋಡಬೇಕಿದೆ.
ಬಾಹುಬಲಿ ಸಿನಿಮಾದ ಅಸಿಸ್ಟೆಂಟ್ ಕ್ಯಾಮೆರಾ ಮೆನ್ ರವೀಂದ್ರನಾಥ ಈ ಸಿನಿಮಾದಲ್ಲೂ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಚಿತ್ರದ ಅನಿಮೇಷನ್ ಕ್ವಾಲಿಟಿ ಕೂಡ ಬಾಲಿವುಡ್ ನ ಚಿತ್ರಕ್ಕೆ ಯಾವ ರೀತಿಯಿಂದಲೂ ಕಡಿಮೆ ಇಲ್ಲ ಎಂದು ಭಾವಿಸಲಾಗಿದೆ. ಈ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹವಾ ಸೃಷ್ಟಿಸಿದೆ. ಈಗಾಗಲೇ 35 ಲಕ್ಷ ಜನರು ಈ ಟ್ರೈಲರ್ ನೋಡಿ, ಮೆಚ್ಚಿಕೊಂಡಿದ್ದಾರೆ.

ಸೈಕೋ ಜಯಂತ್ ಇನ್ ಟ್ರೆಂಡಿಂಗ್ ರಾಣಿ !!!