ರಾಯಚೂರು: ಪೆನ್ನು ಕಳ್ಳತನದ ವಿಚಾರಕ್ಕೆ ಸಂಬಂಧಿಸಿದಂತೆ 3ನೇ ತರಗತಿಯ ವಿದ್ಯಾರ್ಥಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ಚಿತ್ರ ಹಿಂಸೆ ನೀಡಿ, ಕತ್ತಲ ಕೋಣೆಯಲ್ಲಿ ಹಾಕಿದ್ದ ಗುರುಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಜುಲೈ 28 ರಂದು ರಾಯಚೂರು ನಗರದಲ್ಲಿರುವ ರಾಮಕೃಷ್ಣ-ವಿವೇಕಾನಂದ ಆಶ್ರಮ (Ramakrishna – Vivekananda Ashrama)ದಲ್ಲಿ ನಡೆದಿತ್ತು. ಆಶ್ರಮದ ಸಂಚಾಲಕ@ಗುರೂಜಿಯಾಗಿದ್ದ ವೇಣುಗೋಪಾಲ್ ಎಂಬಾತ ಈ ಕೃತ್ಯ ಎಸಗಿದ್ದ. ಸೈಕೋಪಾತ್ ರೀತಿ ವರ್ತಿಸಿದ್ದ ಆರೋಪಿ ವೇಣುಗೋಪಾಲ್ ನು ಸತತ ಮೂರು ದಿನ 3ನೇ ತರಗತಿ ವಿದ್ಯಾರ್ಥಿಯ ಮೇಲೆ ನಿರಂತರವಾಗಿ ಹಲ್ಲೆ ನಡೆಸಿದ್ದ. ಆದರೆ, ತಾಯಿಯ ಕೂಗೋ? ಕರಳಿನ ಕೂಗೋ ಗೊತ್ತಿಲ್ಲ. ತಾಯಿ ಏಕಾಏಕಿ ಆಶ್ರಮಕ್ಕೆ ಬೇಟಿ ನೀಡಿದ್ದಾರೆ. ಆಗ ಈ ಘಟನೆ ಬೆಳಕಿಗೆ ಬಂದಿದೆ.
ಪಾಪಿ ಗುರುಜಿ ಮುಖಕ್ಕೆ ಉಗುರಿನಿಂದ ಪರಚಿ, ಕಟ್ಟಿಗೆ-ಬ್ಯಾಟ್ ನಿಂದ ಹಲ್ಲೆ ನಡೆಸಿದ್ದ. ಕಣ್ಣೀರಿಟ್ಟರೇ ಜಾಸ್ತಿ ಹೊಡೆಯೋದಾಗಿ ಬೆದರಿಸಿ ಮನಸೋ ಇಚ್ಛೆ ಹೊಡೆದಿದ್ದ. ರಾಯಚೂರಿನ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವೇಣುಗೋಪಾಲ್ನನ್ನ ಬಂಧಿಸಲಾಗಿದೆ.
ಮಕ್ಕಳನ್ನ ಆಶ್ರಮಕ್ಕೆ ಬಿಡುವ ಮೊದಲು ಎಚ್ಚರವಹಿಸಿ. ಆಶ್ರಮಗಳ ಬಗ್ಗೆ ತಿಳಿದುಕೊಂಡು ಸೇರಿಸಿ ಎಂದು ಪೋಷಕರಿಗೆ ಎಸ್ಪಿ ಸಲಹೆ ನೀಡಿದ್ದಾರೆ. ಆಶ್ರಮದಲ್ಲಿ ಸುಮಾರು ಎಂಟತ್ತು ವಿದ್ಯಾರ್ಥಿಗಳಿದ್ದು, ಅವರನ್ನು ಮಕ್ಕಳ ರಕ್ಷಣಾ ಇಲಾಖೆ ಸಿಬ್ಬಂದಿ ರಕ್ಷಿಸಿ ಬಾಲಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ. ತಾಯಿಯ ದುಃಖ ಮಾತ್ರ ಇನ್ನೂ ನಿಲ್ಲುತ್ತಿಲ್ಲ.