ಚಿತ್ರದುರ್ಗ: ತಡರಾತ್ರಿ ರಸ್ತೆಯಲ್ಲಿ ಗುಂಪಾಗಿ ನಿಂತಿದ್ದನ್ನು ಪ್ರಶ್ನಿಸಿ, ಮನೆಗೆ ಹೋಗಿ ಅಂತಾ ಹೇಳಿದ್ದಕ್ಕೆ ಪಿಎಸ್‌ಐ (PSI) ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಚಿತ್ರದುರ್ಗದ (Chitradurga) ಖಾಸಗಿ ಹೋಟೇಲ್ ಹತ್ತಿರ ನಡೆದಿದೆ. ತುರುವನೂರು (Turuvanur) ರಸ್ತೆಯಲ್ಲಿ ಮಧುಗಿರಿ (Madhugiri) ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಾಗೂ ಸಂಗಡಿಗರು ತಡರಾತ್ರಿ ರಸ್ತೆಯಲ್ಲಿ ನಿಂತಿದ್ದರು. ಈ ವೇಳೆ ಚಿತ್ರದುರ್ಗ ನಗರಠಾಣೆ ಪಿಎಸ್‌ಐ ಗಾದಿಲಿಂಗಪ್ಪ ತಡವಾಗಿದೆ. ಮನೆಗೆ ಹೋಗಿ ಅಂತಾ ಹೇಳಿದ್ದಾರೆ. ಆ ವೇಳೆ ಹನುಮಂತೇಗೌಡ ಹಾಗೂ ಪಿಎಸ್ ಐ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪಿಎಸ್ ಐ ಹೊಡೆದಿದ್ದಾರೆ. ಆಗ ಬಿಜೆಪಿ ಮುಖಂಡ ಕೂಡ ಹೊಡೆದಿದ್ದಾರೆ. ಈ ವೇಳೆ ಪಿಎಸ್‌ಐ ಗಾದಿಲಿಂಗಪ್ಪ ಅವರ ಕೈಬೆರಳಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ಪೊಲೀಸರಿಂದಲೇ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಹನುಮಂತೇಗೌಡ ಪ್ರತ್ಯಾರೋಪ ಮಾಡಿದ್ದಾರೆ. ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.