ಬೆಂಗಳೂರು : ಕೇಂದ್ರ ಸರ್ಕಾರ ಎಲ್‌ಪಿಜಿ, ಸಿಎನ್‌ಜಿ, ಫರ್ಟಿಲೈಸರ್‌ದು ಕೊರತೆಯಿಂದ ಉಂಟಾಗುವ ಸಮಸ್ಯೆ ಬಗ್ಗೆ ತಿಳಿದು ಅದಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಗ್ಯಾಸ್ ದರ ಹೆಚ್ಚಾದರೂ, ಅದೇ ದರದಲ್ಲಿ ಆಟೋ ಓಡಿಸಬೇಕಾ ಎಂಬ ಆಟೋ ಚಾಲಕರ ಆಕ್ರೋಶದ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರ ಯುದ್ಧದ ಸಮಯದಲ್ಲಿ ಕಣ್ಣು ಮುಚ್ಚಿಕೊಂಡು ಇದ್ದರೆ ಏನು ಆಗುವುದಿಲ್ಲ. ಇದು ಕಾಂಗ್ರೆಸ್ ಸೃಷ್ಟಿಸುವ ಆತಂಕ ಎಂದರೆ ಅದು ಪರಿಹಾರ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಲ್‌ಪಿಜಿ ಕೊರತೆಯಿಂದ ಎಷ್ಟೋ ದೇವಸ್ಥಾನದಲ್ಲಿ ದಾಸೋಹ ನಿಂತಿದೆ. ಸ್ವತಃ ಪ್ರಧಾನಮಂತ್ರಿಗಳ ಕ್ಷೇತ್ರ ವಾರಾಣಸಿಯಲ್ಲಿ ದಾಸೋಹ ನಿಂತಿದೆ. ಇನ್ನು, ಎಷ್ಟೋ ಕಂಪನಿಗಳಲ್ಲಿ ಉತ್ಪಾದನೆ ನಿಂತು ಹೋಗಿದೆ. ಟಾಟಾದವರು 50% ಉತ್ಪಾದನೆ ಕಡಿಮೆ ಮಾಡಿದ್ದಾರೆ. ಆಟೋದವರಿಗೆ ಸಮಸ್ಯೆ ಆಗುತ್ತಿದೆ, ಹೊಟೇಲ್ ಮಾಲೀಕರ ಅಂಗಡಿ ಮುಚ್ಚುತ್ತಿದ್ದಾರೆ ಇಷ್ಟೆಲ್ಲಾಆದರೂ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲಎಂದು ಕಿಡಿಕಾರಿದ್ದಾರೆ.
ಯುದ್ದ ನಡೆಯುತ್ತಿದೆ ಅದರ ಪರಿಣಾಮವಾಗಿ ಸಮಸ್ಯೆ ಆಗುತ್ತಿದೆ ಎಂದು ಜನಸಾಮಾನ್ಯರಿಗೆ ಮಾಹಿತಿ ಕೊಡಿ. ಆತಂಕ ಪಡುವ ಪರಿಸ್ಥಿತಿಯಿಲ್ಲ 75 ದಿನಕ್ಕೆ ಆಗುವ ಗ್ಯಾಸ್ ಇದೆ ಎಂದು ಹೇಳ್ತೀರಾ. ಇನ್ನೊಂದು ಕಡೆ LPG ಬುಕಿಂಗ್ ನಿಯಂತ್ರಣ ಮಾಡ್ತೀರಾ ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಮುಂದುವರೆಸಿ, ಪಿಎಂ ರೀಲ್ ಮಾಡೋಕೆ ಇರೋದಾ ಅಥವಾ ಬರಿ ಮನ್ ಕೀ ಬಾತ್ ಹೇಳಲು ಇರೋದಾ ಎಂದು ವ್ಯಂಗ್ಯ ಮಾಡಿದ ಸಚಿವರು ಮೊದಲು ವಾಣಿಜ್ಯ ವಲಯದಲ್ಲಿ ಇರುವ ಆತಂಕಕ್ಕೆ ಪರಿಹಾರ ನೀಡಬೇಕು. ಅದು ಬಿಟ್ಟು ಕಾಂಗ್ರೆಸ್ ಮೇಲೆ ಗೂಬೆ ಕೂಸಿರುವ ಕೆಲಸ ಮಾಡಬಾರದು ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ಬಿರುಗಾಳಿ ಅವಾಂತರ : ಹಾರಿ ಹೋದ ಶಾಲೆಯ ಮೇಲ್ಚಾವಣಿ



















