ಬೆಂಗಳೂರು: ದ್ಚಿಭಾಷಾ ನೀತಿ ಜಾರಿಗೆ ಒತ್ತಾಯಿಸಿ ಕರೆವೇ ವತಿಯಿಂದ ನಾಳೆ ಬೆಳಗ್ಗೆ 11.30ಕ್ಕೆ ಫ್ರೀಂಡ ಪಾರ್ಕ್ ನಲ್ಲಿ ಧರಣಿ ನಡೆಯಲಿದೆ.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಹೋರಾಟ ನಡೆಯಲಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಇರಲಿ. ತ್ರಿಭಾಷಾ ನೀತಿ ಇರಬಾರದು ಎಂದು ತ್ರಿ ಭಾಷಾ ನೀತಿ ವಿರೋಧಿಸಿ ಹೋರಾಟ ನಡೆಸಲಾಗುತ್ತಿದೆ. ಹಿಂದಿ ಹೇರಿಕೆ ವಿರೋಧಿಸಿ ಧರಣಿಯಲ್ಲಿ ಪ್ರತಿಭಟಿಸಲಾಗುತ್ತಿದೆ.