ಹಾಸನ: ಪಠ್ಯದಲ್ಲಿ ತ್ರಿಭಾಷ ನೀತಿ ವಿರೋಧಿಸಿ ಹಾಸನದಲ್ಲಿ ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಸಲಾಯಿತು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಠ್ಯ ಕ್ರಮವನ್ನು ಕೂಡಲೆರ ಬದಲಾಯಿಸಬೇಕು ಎಂದು ಒತ್ತಾಯಿಸಿದರು. 100 ಅಂಕಗಳಿಗೆ ಎಸ್ಸೆಸ್ಸೆಲ್ಸಿಯಲ್ಲಿ ಹಿಂದಿ ಪರೀಕ್ಷೆ ನಡೆಸಲಾಗುತ್ತಿದೆ.
ಹಿಂದಿಯಲ್ಲಿ ಅನೇಕ ಮಕ್ಕಳು ಉತ್ತೀರ್ಣರಾಗುತ್ತಿಲ್ಲ. ಮಕ್ಕಳ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರಲಾಗುತ್ತಿದೆ. ದಕ್ಷಿಣದ ಕೆಲ ರಾಜ್ಯಗಳು ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿವೆ. ಕರ್ನಾಟಕದಲ್ಲೂ ದ್ವಿ ಭಾಷಾ ನೀತಿಯನ್ನೇ ಅನುಸರಿಸಬೇಕು. ಕನ್ನಡ ಪ್ರಥಮ, ಇಂಗ್ಲಿಷ್ ದ್ವಿತೀಯ ಭಾಷೆ ಇದ್ದರೆ ಅಷ್ಟೇ ಸಾಕು ಎಂದು ಹಾಸನ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಮೂಲಕ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.