ಬೆಂಗಳೂರು: ಸಾವು- ಬದುಕಿನ(Life and Death) ಮಧ್ಯೆ ಹೋರಾಟ ನಡೆಸುತ್ತಿದ್ದ ಹದ್ದಿನ ರಕ್ಷಣೆ ಮಾಡಿ ಮಲ್ಲೇಶ್ವರಂನ ಜನ ಮಾನವೀಯತೆ ಮೆರೆದಿದ್ದಾರೆ.
ಗಾಳಿಪಟದ ದಾರದಿಂದಾಗಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹದ್ದಿನ(eagle) ಪ್ರಾಣಕ್ಕೆ ಕುತ್ತು ಎದುರಾಗಿತ್ತು. ಗಾಳಿಪಟ ಹಾರಿಸಿ ಕೈ ಬಿಟ್ಟಿದ್ದ ದಾರಕ್ಕೆ ಸಿಲುಕಿ ಹದ್ದು ನರಳಾಡುತ್ತಿತ್ತು. ಮಲ್ಲೇಶ್ವರಂನ 2ನೇ ಕ್ರಾಸ್(2ND CROSS OF MALLESWARAM) ನಲ್ಲಿದ್ದ ಸಂಪಿಗೆ ಮರವೊಂದಕ್ಕೆ ಗಾಳಿಪಟದ ದಾರಕ್ಕೆ ಸಿಲುಕಿ ಭಾನುವಾರ ಸಂಜೆ ಹದ್ದು ಒದ್ದಾಡುತ್ತಿತ್ತು.
ಹದ್ದು ನರಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಜೀವ ಉಳಿಸಿದ್ದಾರೆ. ಹದ್ದು ಮರದ ಕೊಂಬೆಯಲ್ಲಿ ಸಿಲುಕಿದ್ದರಿಂದಾಗಿ ಸ್ಥಳೀಯರು ಕೂಡ ಸಾಕಷ್ಟು ಕಷ್ಟಪಡಬೇಕಾಯಿತು.
ಸ್ಥಳೀಯರು ಹದ್ದಿನ ರಕ್ಷಣೆಗಾಗಿ ಬಿಬಿಎಂಪಿ ಹೆಲ್ಪ್‌ಲೈನ್ ಗೆ(BBMP Helpline) ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿಗಳೊಂದಿಗೆ ಸ್ಥಳೀಯರು ಕೂಡ ಕಾರ್ಯಾಚರಣೆ ನಡೆಸಿದರು. ರಕ್ಷಿಸಿದ ನಂತರ ಪ್ರಥಮ ಚಿಕಿತ್ಸೆ (First Aid) ಮಾಡಲಾಯಿತು.