ಬೆಳಗಾವಿ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿದವರ ವಿರುದ್ಧ ಎಫ್ಐಆರ್ (FIR) ದಾಖಲಿಸದ ಪಿಎಸ್ ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಹುಕ್ಕೇರಿ ಪೊಲೀಸ್ ಠಾಣೆ (Hukkeri Police Station) ಪಿಎಸ್ಐ ನಿಖಿಲ್ ಕಾಂಬ್ಳೆ ಅಮಾನತಾಗಿದ್ದಾರೆ. ಅಮಾನತು ಮಾಡಿ ಎಸ್ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ. ಜೂನ್ 26ರಂದು ಶ್ರೀರಾಮಸೇನೆ ಕಾರ್ಯಕರ್ತರು ಗೋವು ಸಾಗಿಸುತ್ತಿದ್ದ ವಾಹನವನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಠಾಣೆಗೆ ತಂದಿದ್ದರು. ಆ ವೇಳೆ ಅಕ್ರಮವಾಗಿ ಗೋವು ಸಾಗಾಟ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಆದರೆ, ಕೇಸ್ ದಾಖಲಿಸದೆ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಬಿಟ್ಟು ಕಳುಹಿಸಿದ್ದಾರೆ.
ಅಲ್ಲದೇ, ಪೊಲೀಸ್ ಠಾಣೆಗೆ ಬಂದ ಶ್ರೀರಾಮಸೇನೆ ಕಾರ್ಯಕರ್ತರಲ್ಲಿ ಗಡಿಪಾರಾದ ರೌಡಿಶೀಟರ್ ಮಹಾವೀರ ಸೊಲ್ಲಾಪುರೆ ಕೂಡ ಇದ್ದ. ಹೀಗಾಗಿ ಅಮಾನತು ಮಾಡಲಾಗಿದೆ.