ಬೆಂಗಳೂರು : ಬೆಂಗಳೂರಿನ ಆವಲಹಳ್ಳಿಯ ಸಲೂನ್ ಮಾಲೀಕ ಮೋಹನ್ ಕುಮಾರ್ ಬ್ಯೂಟಿಷಿಯನ್‌ಗೆ ಪ್ರಪೋಸ್ ಮಾಡಿದ ವಿಚಾರ ಮಾರಾಮಾರಿಗೆ ತಿರುಗಿದೆ. ಪ್ರಪೋಸ್ ಒಪ್ಪದಿದ್ದಕ್ಕೆ ಬ್ಯೂಟಿಷಿಯನ್ ಅನ್ನು ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಆಕೆಯ ಪತಿ ಮತ್ತು ಗ್ಯಾಂಗ್ ಸಲೂನ್ ಮೇಲೆ ದಾಳಿ ನಡೆಸಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಲೂನ್ ಮಾಲೀಕ ಮೋಹನ್ ಕುಮಾರ್ ಅವರ ಬಳಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್‌ಗೆ ಪ್ರಪೋಸ್ ಮಾಡಿದ್ದಾರೆಯೆಂಬ ಆರೋಪ ಕೇಳಿಬಂದಿದೆ. ಆದರೆ ಆಕೆ ಅದನ್ನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ನಂತರ ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಆಕ್ರೋಶಗೊಂಡ ಬ್ಯೂಟಿಷಿಯನ್‌ನ ಪತಿ, ನಾಲ್ಕೈದು ಜನರ ಗುಂಪು ಸೇರಿಸಿಕೊಂಡು ಸಲೂನ್‌ಗೆ ನುಗ್ಗಿ ಮಾಲೀಕ ಮೋಹನ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ತಡೆಯಲು ಬಂದ ಮೋಹನ್ ಅವರ ಪತ್ನಿ ಶ್ರೀಜಾ ಮೇಲೂ ಹಲ್ಲೆ ನಡೆಸಲಾಗಿದ್ದು, ಕುತ್ತಿಗೆ ಹಿಡಿದು ಹಿಂಸಾತ್ಮಕವಾಗಿ ವರ್ತಿಸಿರುವುದಾಗಿ ವರದಿಯಾಗಿದೆ.
ಸಲೂನ್‌ನಲ್ಲಿ ನಡೆದ ಈ ದಾಂಧಲೆ ಮತ್ತು ಹಲ್ಲೆ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಯ ನಂತರ ಮೋಹನ್ ಕುಮಾರ್, ಬ್ಯೂಟಿಷಿಯನ್ ಮತ್ತು ಆಕೆಯ ಪತಿ ಹಾಗೂ ಅವರ ಬೆಂಬಲಿಗರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಗಂಡು ಮಗುವಿನ ವ್ಯಾಮೋಹ : ಗರ್ಭಿಣಿ ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಈಜುಕೊಳಕ್ಕೆ ತಳ್ಳಿ ಕೊಂದ ಪಾಪಿ ಪತಿ



















