ಬೆಂಗಳೂರು: ಮನೆ ಮನೆ ಕಸ ಸಂಗ್ರಹಣೆಗೆ ಟೆಂಡರ್ ಕರೆಯಲು ಘನತ್ಯಾಜ್ಯ ನಿರ್ವಹಣೆ ಕಂಪನಿ ಮುಂದಾಗಿದ್ದು, 7 ವರ್ಷಕ್ಕೆ ಟೆಂಡರ್ ಕರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗಿದೆ.
ಈ ಬಾರಿ ಟೆಂಡರ್ ನಲ್ಲಿ ಹೊಸ ಬದಲಾವಣೆ ಮಾಡಲಾಗಿದ್ದು, ಹೊಸ ಟಿಪ್ಪರ್ ಅಟೋ ಇದ್ದರೆ ಮಾತ್ರ ಟೆಂಡರ್ ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಈಗಾಗಲೇ ಸರ್ಕಾರಕ್ಕೆ ವಾರ್ಷಿಕ 850 ಕೋಟಿ ರೂ. ಟೆಂಡರ್ ಕರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೈಕೋರ್ಟ್ ಸೂಚನೆ ಬೆನ್ನಲ್ಲೇ ಟೆಂಡರ್ ಕರೆಯಲು ಕಂಪನಿ ಮುಂದಾಗಿದೆ.
ಒಣ ಕಸ, ಹಸಿ ಕಸ ಸಂಗ್ರಹಿಸಲು ಅಟೋದಲ್ಲಿ ಪ್ರತ್ಯೇಕ ವ್ಯವಸ್ಥೆ ಇರಬೇಕು. ಅದರಲ್ಲೂ ಮುಚ್ಚಿದ ಅಟೋ ಕಂಟೇನರ್ ಕಡ್ಡಾಯವಾಗಿ ಇರಬೇಕು. ಕಾಂಪ್ಯಾಕ್ಟ್ ಗಳು ಕಡ್ಡಾಯವಾಗಿ ಸಾರಿಗೆ ಇಲಾಖೆಯಿಂದ ಸದೃಢ ಪ್ರಮಾಣ ಪತ್ರ ಹೊಂದಿರಬೇಕು. ಯಾವುದೇ ಕಾರಣಕ್ಕೂ ತೆರೆದ ಲಾರಿ ಅಥವಾ ಅಟೋದಲ್ಲಿ ಕಸ ಸಾಗಿಸುವಂತಿಲ್ಲ ಎಂಬ ನಿಯಮಗಳನ್ನು ಪಾಲಿಸಬೇಕಿದೆ.