ಕೊಪ್ಪಳ : ಸಚಿವ ಪ್ರಿಯಾಂಕ ಖರ್ಗೆ ಆರ್ ಎಸ್ ಎಸ್ ದೆವ್ವ. ಬಿಜೆಪಿ ದೆವ್ವದ ನೆರಳಿನಲ್ಲಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕೊಪ್ಪಳದಲ್ಲಿ ವರದಿಗಾರರೊಂದಿಗೆ ಆರ್‌ಎಸ್‌ಎಸ್‌ಗೆ ಬರುವ ಹಣದ ಬಗ್ಗೆ ಲೆಕ್ಕ ಕೇಳಬೇಕೆನ್ನುವ ವಿಚಾರ ಮಾತನಾಡಿದ ಶಿವರಾಜ ತಂಗಡಗಿ, ಅವರು ಹೇಳಿರುವದರಲ್ಲಿ ತಪ್ಪೇನು. 100 ವರ್ಷ ಇತಿಹಾಸವಿರುವ ಸಂಸ್ಥೆ ನೊಂದಣಿಯಾಗಿಲ್ಲ. ಈ ಸಂಸ್ಥೆಗೆ ಎಷ್ಟು ಹಣ ಬಂದಿದೆ ಎಂಬುವದನ್ನು ಲೆಕ್ಕ ನೀಡಬೇಕು. ಮೊದಲು ಆರ್ ಎಸ್ ಎಸ್ ನವರ ಮೇಲೆ ಐಟಿ ದಾಳಿ ಮೊದಲು ಆಗಬೇಕು ಎಂದು ಕಿಡಿಕಾರಿದ್ದಾರೆ.
ಕೋಮುವಾದದಿಂದಾಗಿ ದೊಡ್ಡ ಕಂಪನಿಗಳು ಕರಾವಳಿಗೆ ಬರುತ್ತಿಲ್ಲ. ದೇಶದಲ್ಲಿ ಕೋಮುವಾದದಿಂದಾಗಿ ಕಂಪನಿಗಳು ಬರಲು ಹಿಂಜರಿಯುತ್ತಿವೆ. ಕಲ್ಯಾಣ ಕರ್ನಾಟಕದ ಭಾಗದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ ಎಂದಿದ್ದಾರೆ.
ಶಾಸಕರು ವಿದೇಶಿ ಪ್ರವಾಸ
ಪ್ರವಾಸಕ್ಕೆ ಹೋಗುವದರಲ್ಲಿ ತಪ್ಪೇನು. ಇಲ್ಲಿ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರರ ಪರ 140 ಶಾಸಕರಿದ್ದಾರೆ. ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ ನಾನು ಕಾಂಗ್ರೆಸ್ ಪರ. ಶಾಸಕರು ಪ್ರವಾಸಕ್ಕೆ ಹೋಗಿ ಬಜೆಟ್ ವೇಳೆಗೆ ವಾಪಸ್ಸಾಗಲಿದ್ದಾರೆ. ಇದರಲ್ಲಿ ಏನು ವಿವಾದವಿಲ್ಲ.. ತುಂಗಭದ್ರಾ ಗೇಟ್ ಅಳವಡಿಕೆಗೆ ಸಿದ್ದತೆ. ಈಗ 2 ಗೇಟ್ ಅಳವಡಿಸಲಾಗಿದೆ. ಈ ತಿಂಗಳು ಅಂತ್ಯಕ್ಕೆ 10 ಗೇಟ್ ಅಳವಡಿಸಲಾಗುವುದು ಮೇ ಅಂತ್ಯಕ್ಕೆ ಎಲ್ಲಾ ಗೇಟ್ ಅಳವಡಿಸಲಾಗುವುದು. ಖಂಡಿತವಾಗಿ ನಿಗಿದಿತ ಸಮಯದಲ್ಲಿ ರೈತರಿಗೆ ನೀರು ನೀಡಲಾಗುವುದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಅಕ್ಟೋಬರ್ 6 ರಂದು ನಡೆದ ಕಾರ್ಯಕ್ರಮಕ್ಕೆ 5 ಕೋಟಿ ರೂಪಾಯಿ ಖರ್ಚಾಗಿದೆ. ಯಾವುದಕ್ಕೆ ಎಷ್ಟು ಖರ್ಚು ಎಂಬುವುದನ್ನು ಲೆಕ್ಕ ನೀಡಲಾಗುವುದು ಕನಕಗಿರಿ, ಆನೆಗೊಂದಿ ಉತ್ಸವ ಆಚರಣೆ ಇಷ್ಟರಲ್ಲಿಯೇ ಕನಕಗಿರಿ ಜನರೊಂದಿಗೆ ಚರ್ಚಿಸಿ ತೀರ್ಮಾನ ಕಳೆದ ವರ್ಷ ಉತ್ಸವ ಆಚರಣೆಯ ಸಂದರ್ಭದಲ್ಲಿ ಸ್ಥಳೀಯರ ವಿರೋಧವಾಯಿತು. ಈಗ ಮತ್ತೊಮ್ಮೆ ಚರ್ಚಿಸಿ ಉತ್ಸವ ಆಚರಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ದೇವದಾಸಿಯರ ಮಕ್ಕಳ ಮದುವೆ
ಅಂತರ್ಜಾತಿ ವಿವಾಹ., ಸರಳ ವಿವಾಹಕ್ಕೆ ಜಿಲ್ಲೆಯಲ್ಲಿ 7 ಕೋಟಿ ರೂಪಾಯಿ ಬಿಡುಗಡೆಯಾಗದ ಹಿನ್ನಲೆ ಸಮಾಜ ಕಲ್ಯಾಣ ಇಲಾಖೆಯಿಂದ ಹಣ ಬಿಡುಗಡೆಯಾಗಲೇ ಬೇಕು. ಯಾವ ಕಾರಣಕ್ಕೆ ಹಣ ಬಂದಿಲ್ಲ ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನ ಎಂದಿದ್ದಾರೆ.
ಇದನ್ನೂ ಓದಿ : ಕುರ್ಚಿ ಸಂಘರ್ಷದ ನಡುವೆಯೇ ಫಾರಿನ್ ಟ್ರಿಪ್‌ಗೆ ಹೊರಟ ‘ಕೈ’ ಶಾಸಕರು



















