ಬೆಂಗಳೂರು: ಕೇಂದ್ರದಿಂದ 1 ರೂ ಉಪಯೋಗವಿಲ್ಲ, ಬಿಜೆಪಿ ಮಾಡಲಾರದ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, 32 ಕಿ.ಲೋಮೀಟರ್ ಡಬರ್ ಡೆಕ್ಕರ್ ಮಾಡುತ್ತಿದ್ದೇವೆ, ಇದೆಲ್ಲ ಮಾಡುತ್ತಿರುವುದು ಟ್ರಾಫಿಕ್ ಕಂಟ್ರೋಲ್ ಗೆ ಅಲ್ಲವೆ, ದಟ್ಟನೆ, ಟ್ರಾಫಿಕ್ ಎಲ್ಲವೂ ಪ್ರಗತಿ ಜೊತೆ ಇರುತ್ತದೆ. ಸಮಸ್ಯೆ ಇದೆ ಎನ್ನುವುದು ತಪ್ಪು, ಪರಿಹರಿಸುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಉದ್ಯೋಗ ಸೃಷ್ಟಿಯಲ್ಲಿ ನಾವು 2ನೇ ಸಾನದಲ್ಲಿದ್ದೇವೆ. ಎರಡು ವರ್ಷದ ಹಿಂದೆ ಬಿಜೆಪಿ ಪಕ್ಷದವರು ಏನು ಮಾಡಿದ್ದರು, ಹಾಗದರೆ ಬಾಂಬೆ, ಡೆಲ್ಲಿ, ಚೆನೈ, ಪೂಣೆಯಲ್ಲಿ ಏನೂ ಸಮಸ್ಯೆ ಇಲ್ಲವೇ, ಸಮಸ್ಯೆ ಗುರುತಿಸಿ ಪರಿಹಾರ ಕೊಡಬೇಕು ಆ ಕೆಲಸ ನಾವು ಮಾಡಿದ್ದೇವೆ ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದ ಒಂದು ರೂ. ಸಹ ಬರುತ್ತಿಲ್ಲ. ಬಿಜೆಪಿ ಮಾಡಲಾರದ ಕೆಲಸ ನಾವು ಮಾಡಿ ತೋರಿಸಿದ್ದೇವೆ. ಬೆಂಗಳೂರಿನ ಬಗ್ಗೆ ಕಾಳಜಿ ಇದ್ದರೆ 10 ರೂ. ತನ್ನಿ, ಸ್ಟೀಲ್ ಫ್ಲೈಓವರ್ ಗೆ ರಾಜೀವ್ ಚಂದ್ರಶೇಖರ್ ವಿರೋಧ ಮಾಡಿದರು. ಟನಲ್, ಸ್ಟೀಲ್ ಫ್ಲೈ ಓವರ್ ಏನೂ ಬೇಡ ಎಂದರೆ ಪರಿಹಾರ ಕೊಡಿ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ವೀರೆಂದ್ರ ಪಪ್ಪಿ ಬಂಧನದ ಬಗ್ಗೆ ಬಿಜೆಪಿ-ಜೆಡಿಎಸ್ ಟೀಕೆ ವಿಚಾರ ಮಾತನಾಡಿ, ಆರ್ ಅಶೋಕ್ 100 ಕೋಟಿ ಕೊಟ್ಟಿದ್ದಾರೆ, ಇದನ್ನು ನೀವು ಹಾಕುತ್ತೀರಾ, ವಿಜಯೇಂದ್ರ ದುಬೈಗೆ ಹೋಗಿ ಬರುತ್ತಾರೆ, ವಿಜಯೇಂದ್ರ ಅಮಿತ್ ಷಾ ಬಿಟ್ ಕಾಯಿನ್ ಕೊಟ್ಟಿದ್ದಾರೆ ಎಂದರೆ ನೀವು ನಂಬುತ್ತೀರಾ ಸಿಎಂ ಆಗಿ ಬರಬೇಕು ಎಂದರೆ ಸುಮ್ಮನೇನಾ? ಕಪ್ಪ ಕೊಡಬೇಕು ಎಂದು ಯಡಿಯೂರಪ್ಪ ಅನಂತ್ ಕುಮಾರ್ ಕಿವಿಯಲ್ಲಿ ಹೇಳಲಿಲ್ಲವಾ? ಆರ್.ಅಶೋಕ್, ವಿಜಯೇಂದ್ರ ದುಡ್ಡು ಕೊಟ್ಟು ಅವರ ಸ್ಥಾನ ಉಳಿಸಿಕೊಂಡಿದ್ದಾರೆ. ನಾನೂ ಈ ರೀತಿ ಹೇಳಬಹುದು ಅಲ್ಲವಾ ? ಇದು ಅವರ ಪಾರ್ಟಿ ವಿಚಾರ. ಇ.ಡಿ ಯಾರ ಕೈನಲ್ಲಿ ಇದೆ? ಕೇಂದ್ರ ಅಲ್ಲವಾ? ಅಮಿತ್ ಷಾರಿಂದ ದಾಖಲೆ ತರಿಸಲಿ ಸುಮ್ಮನೇ ಚಪಲಕ್ಕೆ ಮಾತಾಡುವುದಲ್ಲ ಎಂದು ತಿರುಗೇಟು ನೀಡಿದ್ದಾರೆ.