ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿರುವ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ಯಾವುದೇ ನಿಯಮಗಳನ್ನು ಅಥವಾ ಪ್ರಜಾಪ್ರಭುತ್ವದ ನಿಯಮಗಳನ್ನು ಅನುಸರಿಸಿಲ್ಲ ಎಂದು ಆರೋಪಿಸಿದ್ದಾರೆ.
ಜುಲೈನಲ್ಲಿ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತಗಳೊಂದಿಗೆ ಬಿಜೆಪಿಯ ನಡವಳಿಕೆಯನ್ನು ಹೋಲಿಸಿದ ಪ್ರಿಯಾಂಕಾ ಗಾಂಧಿ, ಪ್ರಕೃತಿ ವಿಕೋಪದಂತೆಯೇ ಬಿಜೆಪಿಯ ನಡವಳಿಕೆಯು ಯಾವುದೇ ನಿಯಮಗಳನ್ನು ಅನುಸರಿಸಿಲ್ಲ. ರಾಜಕೀಯ ಹೋರಾಟಗಳಲ್ಲಿ ಸಾಮಾನ್ಯವಾಗಿ ಅನುಸರಿಸುವ ಯಾವುದೇ ಪ್ರಜಾಪ್ರಭುತ್ವದ ಮಾನದಂಡ ಬಿಜೆಪಿಯಿಂದ ಅನುಕರಣೆ ಆಗಿಲ್ಲ ಎಂದಿದ್ದಾರೆ.
ವಯನಾಡ್ ಜನರು ನನ್ನ ಅಣ್ಣ ರಾಹುಲ್ ಗಾಂಧಿಗೆ ತೋರಿದ ಪ್ರೀತಿಯನ್ನು ನನಗೂ ತೋರಿಸಿದ್ದಾರೆ. ಇದಕ್ಕೆ ನಾನು ಅವರಿಗೆ ಮತ್ತೊಮ್ಮೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ನಾನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ನಾನು ನಿಮಗಾಗಿ ತುಂಬಾ ಶ್ರಮಿಸುತ್ತೇನೆ. ನಿಮ್ಮ ಸಂಸದರನ್ನು ನೋಡಿದಾಗ ನೀವು ಸಂತೋಷಪಡುವಂತೆ ಮಾಡುತ್ತೇನೆ ಎಂದಿದ್ದಾರೆ.