ಬೆಂಗಳೂರು: ಖಾಸಗಿ ರಸ್ತೆಗಳನ್ನು ಇನ್ನು ಮುಂದೆ ಸಾರ್ವಜನಿಕ ರಸ್ತೆ ಅಂತ ಘೋಷಣೆ ಮಾಡುವ ಅಧಿಕಾರ ಇನ್ನು ಮುಂದೆ ಬಿಬಿಎಂಪಿಗೆ ಇರಲಿದೆ.
ಈ ಕುರಿತು ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು ಹೆಚ್.ಕೆ.ಪಾಟೀಲ್ ಈ ವಿಧೇಯಕದ ಕುರಿತು ಮಾಹಿತಿ ನೀಡಿದರು. ನಗರದ ಖಾಸಗಿ ರಸ್ತೆ, ಬೀದಿಗಳು ಇನ್ಮುಂದೆ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಬಿಬಿಎಂಪಿಯೇ ನಗರದ ಖಾಸಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಲಾಗಿದೆ. ಅನಧಿಕೃತ ಕಟ್ಟಡ ಅಥವಾ ಅದರ ಭಾಗ ಬಳಸುವುದನ್ನು ತಪ್ಪಿಸಲು ಈ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.
ಇ-ಸ್ವತ್ತು ತಂತ್ರಾಂಶದಲ್ಲಿ ಕೇವಲ 44 ಲಕ್ಷ ಆಸ್ತಿಗಳು ಮಾತ್ರ ನಮೂದಾಗಿದೆ. ಅಂದರೆ, ಸುಮಾರು 96 ಲಕ್ಷ ಆಸ್ತಿಗಳು ಇ-ಸ್ವತ್ತು ತಂತ್ರಾಂಶದಿಂದ ಹೊರಗಡೆ ಇವೆ. ಎಂದಿದ್ದಾರೆ. ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕವನ್ನೂ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಭೂನಿರ್ಬಂಧಿತ ಬಿ ಖರಾಬನ್ನು ಸುತ್ತ ಇರುವವರಿಗೆ ಮಂಜೂರು ಮಾಡಲು ಅವಕಾಶ ಕೊಟ್ಟಿದ್ರು. ಇದರ ದುರುಪಯೋಗ ಆಗಿರುವುದು ಪತ್ತೆಯಾಗಿದೆ. ಬಿ ಖರಾಬು ಭೂಮಿಯನ್ನು ಮಂಜೂರು ಮಾಡುವಲ್ಲಿ ಇರುವ ಲೋಪಗಳನ್ನು ಸರಿಪಡಿಸಲಾಗಿದೆ ಎದಿದ್ದಾರೆ.
3800 ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲಾಗಿದೆ. ಈ ಗ್ರಾಮಗಳಿಗೆ ಹೆಸರು ಇಡಲು, ಮರು ನಾಮಕರಣ ಮಾಡಲು ಹೊಸ ಸೆಕ್ಷನ್ ಸೇರಿಸಲಾಗಿದೆ. ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕಕ್ಕೂ ಅಂಗೀಕಾರ ನೀಡಲಾಯಿತು. ಈ ವಿಧೇಯಕ ಮೂಲಕ ನೋಂದಣಿ ಪ್ರಕ್ರಿಯೆಗಳಲ್ಲಿ ಇನ್ನಷ್ಟು ಸುಧಾರಣೆಯನ್ನು ಸರ್ಕಾರ ತಂದಿದೆ ಎಂದಿದ್ದಾರೆ.
ಮಂಡ್ಯದಲ್ಲಿ ಪ್ರತ್ಯೇಕ ಕೃಷಿ ವಿವಿ ಸ್ಥಾಪನೆಗೆ ವಿಧೇಯಕ ಅಂಗೀಕರಿಸಲಾಯಿತು. ಮಂಡ್ಯದ ವಿ.ಸಿ ಫಾರ್ಮ್ನಲ್ಲಿ ಪ್ರತ್ಯೇಕ ಕೃಷಿ ವಿವಿ ಸ್ಥಾಪನೆಗೆ ಈ ಮೂಲಕ ನಿರ್ಧಾರ ಮಾಡಲಾಗಿದೆ. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳ ಬೆಳೆಗಳ ಉತ್ಪಾದನೆ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆ ನಡೆಸುವುದಕ್ಕಾಗಿ ಅವಕಾಶ ಸಿಗಲಿದೆ.