ಮೆಕ್ಸಿಕೋ : ಸ್ಯಾನ್ ಮಾಟಿಯೊ ಆಟೆಂಕೋದಲ್ಲಿ ಖಾಸಗಿ ಜೆಟ್ ತುರ್ತು ಲ್ಯಾಂಡಿಂಗ್ ವೇಳೆ ಪತನವಾಗಿದ್ದು, ದುರಂತದಲ್ಲಿ 10 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಆಕಾಪುಲ್ಕೊದಿಂದ ಟೇಕ್ ಆಫ್ ಆಗಿದ್ದ ಜೆಟ್, ಮೆಕ್ಸಿಕೋ ಸಿಟಿಯಿಂದ 31 ಮೈಲು ಪಶ್ಚಿಮಕ್ಕೆ ಇರುವ ಟ್ಯುಲುಕಾ ವಿಮಾನ ನಿಲ್ದಾಣದತ್ತ ತೆರಳುತ್ತಿತ್ತು. ದುರಂತ ಸಂಭವಿಸಿದ ಸ್ಥಳ ವಿಮಾನ ನಿಲ್ದಾಣದಿಂದ ಸುಮಾರು ಮೂರು ಕಿಲೋಮೀಟರ್ ದೂರದ ಕೈಗಾರಿಕಾ ಪ್ರದೇಶ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೆಟ್‌ನಲ್ಲಿ ಎಂಟು ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಆದರೆ ದುರಂತ ಸಂಭವಿಸಿದ ಹಲವು ಗಂಟೆಗಳ ಬಳಿಕವೂ ಏಳು ಮೃತದೇಹಗಳನ್ನು ಮಾತ್ರ ಪತ್ತೆ ಮಾಡಲಾಗಿದೆ ಎಂದು ಮೆಕ್ಸಿಕೊದ ಸರ್ಕಾರಿ ನಾಗರಿಕ ರಕ್ಷಣಾ ಸಂಯೋಜಕ ಆ್ಯಡ್ರಿನ್ ಹೆರ್ನಾಂಡಿಸ್ ಹೇಳಿದ್ದಾರೆ. ಜೆಟ್ ಬೀಳೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಜೆಟ್ ಪತನಕ್ಕೆ ತಜ್ಞರು ಕಾರಣ ಹುಡುಕುತ್ತಿದ್ದಾರೆ.
ಇದನ್ನೂ ಓದಿ : ದಾಖಲೆ ಚಳಿಗೆ ಬೆಂಗಳೂರು ಗಡಗಡ | 8 ವರ್ಷಗಳಲ್ಲಿ ಕನಿಷ್ಠ ತಾಪಮಾನ ದಾಖಲು!



















