ಬೆಂಗಳೂರು : ಹಬ್ಬ ಬಂತು ಅಂದ್ರೆ ಬ್ಯಾಗು ಹಿಡಿದು ಸೀದಾ ನಡಿ ಅಂತ ಎಲ್ಲಾ ತಮ್ಮೂರಿನ ಕಡೆ ಬೆಂಗಳೂರಿಂದ ಬಸ್ ಹತ್ತಿ ಹೊರಡುವುದಕ್ಕೆ ಶುರು ಮಾಡ್ತಾರೆ. ಆದ್ರೆ, ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು ಇದೀಗ ಬಸ್ ಟಿಕೆಟ್ ರೇಟ್ ಒನ್ ಟು ತ್ರಿಬಲ್ ಅಂತ ಅನೌನ್ಸ್ ಮಾಡಿದ್ದಾರೆ.
ಟಿಕೆಟ್ ಬುಕ್ ಮಾಡೋಕೆ ಹೊರಟ ಜನರು ಶಾಕ್ ಆಗಿದ್ದು, ಭೂಮಿಗಿಂತ ಭಾರವಾದ ಈ ದರ ನೋಡಿದ್ರೆ, ಗಗನ ಪ್ರಯಾಣಕ್ಕೆ ಏಣಿ ಹಾಕೋದ್ ವಾಸಿ ಅಂತಿದ್ದಾರೆ. ದೀಪಾವಳಿ ಹಬ್ಬಕ್ಕೆ ರಾಕೆಟ್ನಂತೆ ಖಾಸಗಿ ಬಸ್ಗಳ ಟಿಕೆಟ್ ಬೆಲೆ ಮೇಲಕ್ಕೇರಿದ್ದು, ಕೆಲ ಖಾಸಗಿ ಬಸ್ ಮಾಲೀಕರು ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ಹೊರಟವರ ಜೇಬಿನ ಸುಲಿಗೆಗೆ ಮುಂದಾಗಿದ್ದಾರೆ.
ರೇಟ್ ಟ್ರಬಲ್!
ಬೆಂಗಳೂರು – ಮಡಿಕೇರಿ
ಇಂದಿನ ದರ ₹500- ₹600
ಅ.17ಟಿಕೆಟ್ ದರ ₹2299- ₹5000
ಬೆಂಗಳೂರು – ಉಡುಪಿ
ಇಂದಿನ ದರ ₹600- ₹950
ಅ. 17 ಟಿಕೆಟ್ ದರ ₹2500- ₹3700
ಬೆಂಗಳೂರು-ಧಾರವಾಡ
ಇಂದಿನ ದರ ₹800 ₹1200
ಅ. 17 ಟಿಕೆಟ್ ದರ ₹1700-₹3000
ಬೆಂಗಳೂರು -ಬೆಳಗಾವಿ
ಇಂದಿನ ದರ ₹800 ₹1000
ಅ. 17ಟಿಕೆಟ್ ದರ ₹2000-₹3999
ಬೆಂಗಳೂರು – ದಾವಣಗೆರೆ
ಇಂದಿನ ದರ ₹600 ₹800
ಅ. 17, ಟಿಕೆಟ್ ದರ 1300-₹4590
ಬೆಂಗಳೂರು – ಮಂಗಳೂರು
ಇಂದಿನ ದರ ₹600- ₹950
ಅ. 17 ಟಿಕೆಟ್ ದರ ₹2500- ₹3500