ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಮೂರು ದೇಶಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.
ಪ್ರಧಾನಿ ಅವರು ಮೊದಲು ನೈಜೀರಿಯಾಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಬ್ರೆಜಿಲ್ ಹಾಗೂ ನಂತರ ಗಯಾನಾಕ್ಕೆ ಹೋಗಲಿದ್ದಾರೆ.
ನವೆಂಬರ್ 16-17 ರಂದು ನೈಜೀರಿಯಾ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ ಬ್ರೆಜಿಲ್ ತಲುಪಲಿದ್ದು, ಅಲ್ಲಿ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಗಯಾನಾಗೆ ತೆರಳಲಿದ್ದಾರೆ.
ಪ್ರಧಾನಿ ಮೋದಿಯವರ ನೈಜೀರಿಯಾ ಭೇಟಿ ಹಲವು ವಿಚಾರಗಳನ್ನು ಅಲ್ಲಿ ಅಧ್ಯಕ್ಷ ಜತೆಗೆ ಚರ್ಚಿಸಲಿದ್ದಾರೆ. ನೈಜೀರಿಯಾ ಭೇಟಿ ಮೋದಿ ಹಾಗೂ ಭಾರತಕ್ಕೆ ವಿಶೇಷವಾಗಿದೆ. ಕಾರಣ 17 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಮೊದಲ ಭಾರಿಗೆ ನೈಜೀರಿಯಾಕ್ಕೆ ಭೇಟಿ ನೀಡುತ್ತಿದ್ದಾರೆ. 2007ರ ಅಕ್ಟೋಬರ್ ನಲ್ಲಿ ಮನಮೋಹನ್ ಸಿಂಗ್ ನೈಜೀರಿಯಾಕ್ಕೆ ಭೇಟಿ ನೀಡಿದ್ದರು. ಆ ನಂತರ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಪ್ರವಾಸ ಕೈಗೊಂಡಿದ್ದಾರೆ.
ಗಯಾನಾದಲ್ಲಿ ನಡೆಯಲಿರುವ CARICOM-India ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಾತನಾಡಲಿದ್ದಾರೆ. ಇದು ಕೂಡ ವಿಶೇಷತೆ ಪಡೆದಿದೆ. ಏಕೆಂದರೆ 50 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಗಯಾನಕ್ಕೆ ಹೊರಟಿದ್ದಾರೆ.