ಪ್ರಯಾಗರಾಜ್: ಮಹಾಕುಂಭ 2025ರ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದಾರೆ.
ಪ್ರಯಾಗರಾಜ್ ನಲ್ಲಿರುವ ಸಂಗಮ್ ನ ಪವಿತ್ರ ಭೂಮಿಗೆ ಪ್ರಧಾನಿ ನರೇಂದ್ರ ಮೋದಿ ಭೇಟ ನೀಡಿದ್ದಾರೆ. ಅಲ್ಲದೇ, 5,500 ಕೋಟಿ ರೂ.ಮೌಲ್ಯದ ವಿವಿಧ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂತರು, ಋಷಿಗಳು ಮತ್ತು ಅಸಂಖ್ಯಾತ ಕಾರ್ಯಕರ್ತರ ಪ್ರಯತ್ನಗಳ ಫಲವಾಗಿ ಈ ನಾಡು ಪವಿತ್ರವಾಗಿದೆ. ಮಹಾ ಕುಂಭ ಪ್ರಪಂಚದಾದ್ಯಂತ ಗಮನ ಸೆಳೆಯುವ “ಏಕತೆಯ ಮಹಾ ಯಾಗ” ಎಂದು ಮೋದಿ ಬಣ್ಣಿಸಿದರು.
ನಂಬಿಕೆ, ಜ್ಞಾನ ಮತ್ತು ಭಕ್ತಿಯ ಸಂಗಮಕ್ಕೆ ಹೆಸರುವಾಸಿಯಾದ ಮಹಾ ಕುಂಭವು ಸತತ 45 ದಿನಗಳವರೆಗೆ ಪ್ರತಿದಿನ ಲಕ್ಷಾಂತರ ಭಕ್ತರನ್ನು ಸ್ವಾಗತಿಸಲು ಸಜ್ಜಾಗಿದೆ. ಈ ಸಮಾರಂಭ “ಹೊಸ ನಗರ ಮತ್ತು ಹೊಸ ಇತಿಹಾಸ”ವನ್ನು ಪ್ರಯಾಗ್‌ರಾಜ್‌ನ ಪವಿತ್ರ ಭೂಮಿಯಲ್ಲಿ ರೂಪಿಸಲಿದೆ.
ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರಯಾಣವನ್ನು ಪ್ರತಿನಿಧಿಸುತ್ತದೆ. ಇದು ಕೇವಲ ಬಾಹ್ಯ ಆಚರಣೆಗಳ ಬಗ್ಗೆ ಅಲ್ಲ ಆಂತರಿಕ ಪ್ರಜ್ಞೆಯನ್ನು ಕೂಡ ಜಾಗೃತಗೊಳಿಸುತ್ತದೆ ಎಂದಿದ್ದಾರೆ.