ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ ದೇವೇಗೌಡ (HD Devegowda) ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಪ್ರಧಾನಿ ನಿವಾಸದಲ್ಲಿ ಭೇಟಿಯಾಗಿ, ಹಲವು ಮಹತ್ವದ ವಿಚಾರಗಳನ್ನ ಚರ್ಚಿಸಿದ್ದಾರೆ. ಈ ವಿಷಯವನ್ನು ಸ್ವತಃ ಮೋದಿ ಅವರೇ ಹಂಚಿಕೊಂಡಿದ್ದಾರೆ. ಲೋಕಕಲ್ಯಾಣ ಮಾರ್ಗದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಜೀ ಅವರನ್ನು ಭೇಟಿಯಾಗಿರುವುದು ಗೌರವದ ಸಂಗತಿ. ವಿವಿಧ ವಿಚಾರಗಳ ಬಗ್ಗೆ ಅವರಿಗಿರುವ ಬುದ್ಧಿವಂತಿಕೆ ಹಾಗೂ ಅವರ ಆಳವಾದ ದೃಷ್ಟಿಕೋನ ಅತ್ಯಂತ ಮೌಲ್ಯಯುತವಾಗಿದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ ಮೋದಿ ಅವರು ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದರ ಅಧ್ಯಾತ್ಮದ ಪ್ರಿಯ ತಾಣ ʻವಿವೇಕಾನಂದ ರಾಕ್ ಸ್ಮಾರಕʼಕ್ಕೆ ಭೇಟಿ ನೀಡಿದ್ದರು. ಇದರ ನೆನಪಿನಾರ್ಥವಾಗಿ ವಿವೇಕಾನಂದ ಮೂರ್ತಿಯ ಮುಂದೆ ಧ್ಯಾನಸ್ಥರಾಗಿರುವ ಮೋದಿ ಅವರ ಕಲಾಕೃತಿಯನ್ನು ಉಡುಗೊರೆಯಾಗಿ ದೇವೇಗೌಡರು ನೀಡಿದ್ದಾರೆ. ಸ್ವೀಕರಿಸಿದ ಮೋದಿ, ಇದು ಕನ್ಯಾಕುಮಾರಿಗೆ ಭೇಟಿ ನೀಡಿದ ಕ್ಷಣಗಳತ್ತ ನನ್ನ ಮನಸ್ಸನ್ನು ಸೆಳೆಯಿತು. ಅದಕ್ಕಾಗಿ ನಾನು ಕೃತಜ್ಞನಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.
ರಾಜ್ಯಸಭಾ ಅಧಿವೇಶನದಲ್ಲಿ ದೇವೇಗೌಡ ಅವರು ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿದ ವಿಷಯವನ್ನು ಪ್ರಸ್ತಾಪಿಸಿದ್ದರು.