ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕುಬೇರನ ಮದುವೆಗೆ ಆಗಮಿಸಿ, ಶುಭ ಹಾರೈಸಿದ್ದಾರೆ.
ನವವಿವಾಹಿತರಾದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Anant Ambani- Radhika Merchant Wedding) ಅವರ ಶುಭ ಆಶೀರ್ವಾದ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಿದ್ದಾರೆ. ಶುಕ್ರವಾರದಂದು ಸಿರಿವಂತಿಕೆಯ ಸೊಬಗಿನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ಕಲ್ಯಾಣ ಮಹೋತ್ಸವ ನಡೆದಿದೆ.
ಮುಂಬೈನ ಜಿಯೋ ವರ್ಲ್ಡ್ ಕನ್ವೆಷನ್ ಸೆಂಟರ್ ಈ ವರ್ಷದ ಅತಿ ಐಷಾರಾಮಿ ಮದುವೆಗೆ ಸಾಕ್ಷಿಯಾಗಿತ್ತು. ಉದ್ಯಮಿ ಮುಖೇಶ್ ಅಂಬಾನಿ ಕೊನೆಯ ಪುತ್ರ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆಯಿತು. ಸಮಾರಂಭದಲ್ಲಿ ದೇಶ-ವಿದೇಶದ ಗಣ್ಯರು, ಬಾಲಿವುಡ್ ನಟ-ನಟಿಯರು, ರಾಜಕೀಯ ನಾಯಕರು ಕ್ರೀಡಾಪಟುಗಳು ಭಾಗವಹಿಸಿದ್ದರು. ಕುಬೇರನ ಮದುವೆಯಲ್ಲಿ ಬಾಲಿವುಡ್ ಬಳಗವೇ ಭಾಗವಹಿಸಿತ್ತು. ಅಜಯ್ ದೇವಗನ್ ಮತ್ತು ಪುತ್ರ, ಅನುಪಮ್ ಖೇರ್, ವಿಕ್ಕಿ ಕುಶಾಲ್, ಕತ್ರಿನಾ ಕೈಫ್, ಟಾಲಿವುಡ್ ಸ್ಟಾರ್ ಮಹೇಶ್ ಬಾಬು ದಂಪತಿ, ರಣಬೀರ್ ಕಪೂರ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಶಾರುಖ್ ಖಾನ್ ದಂಪತಿ, ಸುನೀಲ್ ಶೆಟ್ಟಿ, ಸಲ್ಮಾನ್ ಖಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಯಶ್ ಕೂಡ ಅಂಬಾನಿ ಮಗನ ಮದುವೆಯಲ್ಲಿ ಭಾಗಿಯಾದ್ದರು. ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಫ್ಯಾಮಿಲಿ ಕೂಡ ಮದುವೆಯಲ್ಲಿ ಭಾಗಿಯಾಗಿತ್ತು. ಅಂಬಾನಿ ಪುತ್ರನ ಕಲ್ಯಾಣ ಕಳೆದ 7 ತಿಂಗಳಿಂದಲೂ ನಡೆಯುತ್ತಿದೆ. ಕಳೆದ ಡಿಸೆಂಬರ್ 29ರಂದು ಅನಂತ್ ರಾಧಿಕಾ ಜೋಡಿಗೆ ನಿಶ್ಚಿತಾರ್ಥವಾಗಿತ್ತು. ಇದೇ ವರ್ಷ ಜನವರಿ 18 ಮತ್ತು 19ರಂದು ಮೆಹಂದಿ ಕಾರ್ಯಕ್ರಮ ನಡೀತು. ಮಾರ್ಚ್ 1ರಂದು ವಿವಾಹ ಪೂರ್ವ ಪಾರ್ಟಿ, ಮೇ 28ರಂದ ಜೂನ್ 1ರವರೆಗೆ ವಿವಾಹ ಪೂರ್ವ ಕ್ರೂಸ್ ಪಾರ್ಟಿ, ಜುಲೈ 2ರಂದು ಸಾಮೂಹಿಕ ವಿವಾಹ ನಡೆಸಲಾಗಿತ್ತು.