ಹೊನ್ನಾವರ: ರಾಜ್ಯದ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರು ನೀಡುವ ‘ತಟ್ಟೆ ಹಣ’ಕ್ಕಾಗಿ ಇಬ್ಬರು ಅರ್ಚಕರು ಭಕ್ತರ ಮುಂದೆಯೇ ಬಡಿದಾಡಿಕೊಂಡಿರು ಘಟನೆ ನಡೆದಿದೆ.
ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್ ಮತ್ತು ರಮಾನಂದ ಭಟ್ ಅವರ ನಡುವೆ ಈ ಘರ್ಷಣೆ ನಡೆದಿದೆ. ಹಣಕ್ಕಾಗಿ ಒಬ್ಬರಿಗೊಬ್ಬರು ಜಗಳವಾಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಭಕ್ತ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ದೇವಸ್ಥಾನದ ಹಕ್ಕಿಗಾಗಿ ಈ ಕುಟುಂಬದ ನಡುವೆ ದಶಕಗಳಿಂದ ಕೋರ್ಟ್‌ನಲ್ಲಿ ದಾವೆ ನಡೆಯುತ್ತಿದ್ದು, ಇದೀಗ ಪೂಜೆ ವಿಚಾರವಾಗಿ ಪರಸ್ಪರ ನೂಕಾಟ ನಡೆಸಿದ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಇದನ್ನೂ ಓದಿ: ತುಳುನಾಡಿನ ದೈವಕ್ಕೆ ಅಪಮಾನ ಆರೋಪ | ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ FIR!



















