ಮೈಸೂರು : ಹುಲಿ ದಾಳಿ ತಪ್ಪಿಸಿ, ಮನುಷ್ಯರ ಜೀವ ರಕ್ಷಿಸಿಯೆಂದು ಹನಗೋಡು ಗ್ರಾಮಸ್ಥರಿಂದ ಹೆದ್ದಾರಿ ತಡೆದು ಆಕ್ರೋಶಿಸುತ್ತಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ಟಯರ್ ಗೆ ಬೆಂಕಿಹಚ್ಚಿ ಗ್ರಾಮಸ್ಥರ ಪ್ರತಿಭಟನೆ ಮಾಡಿದ್ದಾರೆ. ವಾರದಲ್ಲಿ ಎಂಟು ಹಸು,ಹದಿನೈದು ಮೇಕೆಯನ್ನು ಹುಲಿ ತಿಂದಿದೆ. ಇದರಿಂದ ಹೆದರಿ ಊರ ಜನರು ಮನೆಯಿಂದಲೇ ಹೊರ ಬರುತ್ತಿಲ್ಲ ಇದಕ್ಕಾಗಿ ಕ್ರಮ ತೆಗೆದುಕೊಳ್ಳಬೇಕಾಗಿ ಆಕ್ರೋಶಿಸುತ್ತಿದ್ದಾರೆ.
ಹುಲಿಸೆರೆಗೆ ಮುಂದಾಗದ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ. ಹುಲಿ ಸೆರೆ ಹಿಡಿಯುವ ತನಕ ಬಂದ್ ನಿಲ್ಲಿಸಲ್ಲ ಅಂತ ಪ್ರತಿಭಟಿಸುತ್ತಿದ್ದಾರೆ.
ಇದನ್ನೂ ಓದಿ : ಯಾದಗಿರಿ | ಹಲ್ಲೆಗೊಳಗಾಗಿದ್ದ SDA ಮಹಿಳಾ ಅಧಿಕಾರಿ ಸಾವು.. ನಾಲ್ವರು ಆರೋಪಿಗಳ ಬಂಧನ!



















