ಕರಾವಳಿ ಮಾಂಸಾಹಾರಿಗಳ ನೆಚ್ಚಿನ ಆಹಾರ ಮೀನೂಟ. ಸಮುದ್ರದ ತಾಜಾ ಮೀನು ಸಿಗುವ ಸ್ಥಳವಾದ್ದರಿಂದ ಅಲ್ಲಿನ ಫ್ರೆಶ್ ಮೀನಿನ ಜೊತೆ ಕುಸಲಕ್ಕಿ ಅನ್ನ ಸವಿಯುವುದೆಂದರೇ ಭೋಜನಪ್ರಿಯರಿಗೆ ನಿತ್ಯದ ಹಬ್ಬ. ರಾಜ್ಯದ ಕರಾವಳಿಗರು ತಮ್ಮ ಶೈಲಿಯ ಮೀನೂಟದ ಹೊಟೇಲ್ ತೆರೆದು ದೇಶ-ವಿದೇಶಗಳಲ್ಲೂ ತಯಾರಿಸಿ ಮೀನಿನ ರುಚಿ ಹತ್ತಿಸಿದ್ದಾರೆ. ವಿಶೇಷವಾಗಿ ಕುಂದಾಪುರ ಶೈಲಿಯ ಒಂದಷ್ಟು ಮೀನು ಆಹಾರವು ಬಹು ಬೇಡಿಕೆ ಹೊಂದಿವೆ. ಕುಂದಾಪುರ ಶೈಲಿಯ ಮೀನು ಹೊಟೇಲ್ ಎಂದರೇ ಸಾಕು, ಅಲ್ಲೊಂದು ರುಚಿಯ ಗ್ಯಾರಂಟಿ ಇದ್ದೇ ಇರುತ್ತೆ.

ಹೌದು, ಅದೇ ರುಚಿಯ ಗ್ಯಾರಂಟಿ ಹೊತ್ತ ಹೊಟೇಲೊಂದು ಉತ್ತರ ಕನ್ನಡ ಜಿಲ್ಲೆಯ ಶಿರ್ಸಿ (Sirsi)ಯಲ್ಲಿ ಪ್ರಾರಂಭಗೊಳ್ಳಲಿದೆ. ಸೆ. 6 ಶುಕ್ರವಾರದಂದು ಶಿರ್ಸಿಯ ಭಾಪೂಜಿ ನಗರದ ಟಿ.ಎಸ್.ಎಸ್. ರಸ್ತೆಯ ಬಳಿ “ಹೊಟೇಲ್ ಶ್ರೀನಿಧಿ” ಎಂಬ ಮೀನು ಊಟದ ಹೊಟೇಲ್ ಪೂಜಾ ಕಾರ್ಯ ನೆರವೇರಿಸಿಕೊಂಡಿದೆ. “ಕುಂದಾಪುರ ಶೈಲಿಯ ಮೀನು ಊಟದ ವಿಶೇಷತೆಯೊಂದಿಗೆ ಹೊಟೇಲು ಕಾರ್ಯದಲ್ಲಿನ ನುರಿತ ಸಿಬ್ಬಂದಿಗಳೊಂದಿಗೆ ಸುಸಜ್ಜಿತ ವ್ಯವಸ್ಥೆ ಮಾಡಿಕೊಂಡಿದ್ದು, ಅಡುಗೆಗೆ ಸಂಬಂಧಿಸಿದಂತೆ ಕುಂದಾಪುರ ಶೈಲಿಯ ರಸಪಾಕ ಪ್ರವೀಣರಿದ್ದು, ಇದೇ ಹತ್ತನೇ ತಾರೀಕಿನಿಂದ,(ಸೆ.10 ಮಂಗಳವಾರ) ಮಾಂಸಾಹಾರ ಪ್ರಿಯರಿಗೆ ಶುಚಿ ಹಾಗೂ ಸ್ವಾಧಿಷ್ಟ ಭಕ್ಷ್ಯ ನಿತ್ಯವೂ ಶ್ರೀನಿಧಿಯಲ್ಲಿ ದೊರೆಯಲಿದೆ” ಎನ್ನುತ್ತಾರೆ ಹೊಟೇಲ್ ಮಾಲೀಕ ಧನಂಜಯ್ ಉಪ್ಪುಂದ.