ಬೆಂಗಳೂರು: ಬಿಬಿಎಂಪಿ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದ್ದು, ಶನಿವಾರ ಬಜೆಟ್ ಮಂಡನೆಯಾಗಲಿದೆ.
ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಅಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ 5ನೇ ಬಾರಿಗೆ ಜನಪ್ರತಿನಿಧಿಗಳು ಇಲ್ಲದೆ ಅಧಿಕಾರಿಗಳು ಬಜೆಟ್ ಮಂಡಿಸಲಿದ್ದಾರೆ.
ನಗರದ ಟೌನ್ ಹಾಲ್ ನಲ್ಲಿ ಶನಿವಾರ ಬೆಳಗ್ಗೆ 11ಕ್ಕೆ ಬಜೆಟ್ ಮಂಡಿಸಲಾಗುತ್ತದೆ. ಈ ಬಾರಿಯೂ ಕೂಡ ಪೇಪರ್ ಲೆಸ್ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ 19 ಸಾವಿರ ಕೋಟಿ ರೂ. ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಈಗಾಗಲೇ ಬಿಬಿಎಂಪಿಗೆ ರಾಜ್ಯ ಸರ್ಕಾರ 7 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಪಾಲಿಕೆ ಅಸ್ತಿಯಿಂದ 6 ಸಾವಿರ ಕೋಟಿ ರೂ. ಆದಾಯ ಹರಿದು ಬರುತ್ತಿದೆ. ಹೊಸ ಜಾಹೀರಾತು ಕಾಯ್ದೆಯಿಂದ ಒಂದೂವರೆ ಸಾವಿರ ಕೋಟಿ ರೂ. ಆದಾಯ ಸೇರಿದಂತೆ ಇತರೆ ಮೂಲಗಳಿಂದ ಎರಡು ಸಾವಿರ ಕೋಟಿ ರೂ. ಆದಾಯ ಬರುವ ಅಂದಾಜಿದೆ. ಇವುಗಳನ್ನೆಲ್ಲ ಕ್ರೋಢೀಕರಿಸಿ 19 ಸಾವಿರ ಕೂಟಿ ರೂ. ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಗಾತ್ರದ ಬಜೆಡ್ ಮಂಡನೆಗೆ ಸಿದ್ಧತೆ ನಡೆಸಲಾಗಿದೆ.
ಬಿಬಿಎಂಪಿ ಬಜೆಟ್ ನ ಹೈಲೈಟ್ಸ್
- ಕಾಮಗಾರಿ ವಿಭಾಗ..
ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಕೆಲವು ರಸ್ತೆಗಳಿಗೆ ವೈಟ್ ಟ್ಯಾಪಿಂಗ್
ಪಾರ್ಕ್, ಫುಟ್ ಪಾತ್ ಉನ್ನತೀಕರಣ ಹಾಗೂ ಹೈಟೆಕ್ ಸ್ಪರ್ಶ
ಟ್ರಾಫಿಕ್ ಕಂಟ್ರೋಲ್ ಗೆ ಅಂಡರ್ ಪಾಸ್ ನಿರ್ಮಾಣ
ಕೆರೆ, ರಾಜಕಾಲುವೆ ಹುಳು ಎತ್ತುವುದಕ್ಕೆ ಹೆಚ್ಚಿನ ಒತ್ತು
ಪಾಲಿಕೆ ವ್ಯಾಪ್ತಿಯ ಅಸ್ತಿಗಳ ರಕ್ಷಣೆಗೆ ತಂತಿಬೇಲಿ ನಿರ್ಮಾಣ
ನಗರದ ವಿವಿಧ ಕಡೆ ಪಾರ್ಕಿಂಗ್ ಸ್ಥಳಗಳ ನಿರ್ಮಾಣ
ಅದಾಯ ಹೆಚ್ಚಿಸಲು ಹೊಸ ಪಾರ್ಕಿಂಗ್ ನೀತಿ - ಶಿಕ್ಷಣ
ಬಿಬಿಎಂಪಿಯಿಂದ ಮೆಡಿಕಲ್ ಕಾಲೇಜ್ ನಿರ್ಮಾಣ ಸಾಧ್ಯತೆ?
ಬಡ ವಿದ್ಯಾರ್ಥಿಗಳಿಗೆ ಪಬ್ಲಿಕ್ ಶಾಲೆ ಓಪನ್
ಬಿಬಿಎಂಪಿ ಶಾಲೆ ಮಕ್ಕಳಿಗೆ ಉಚಿತ ಕಂಪ್ಯೂಟರ್ ವಿತರಣೆ
ಪಾಳುಬಿದ್ದ ಶಾಲೆಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ
ಬಿಬಿಎಂಪಿ ಶಾಲೆಗಳಿಗೆ ಸರ್ಕಾರದಿಂದ ಶಿಕ್ಷಕರ ನೇಮಕ
ಹಸಿರು ಬೆಂಗಳೂರು ಹೆಸರಲ್ಲಿ ನಗರದಲ್ಲಿ ಗಿಡಗಳ ನೆಡುವುದು - ಅರೋಗ್ಯ ಇಲಾಖೆ
ಇಂದಿರಾ ಕ್ಯಾಂಟೀನ್ ಗೆ ಹೆಚ್ಚಿನ ಅನುದಾನ
ಪ್ರತಿ ವಾರ್ಡ್ ನಲ್ಲಿ ಇಂದಿರಾ ಕ್ಯಾಂಟೀನ್ ಸೌಲಭ್ಯ ವಿಸ್ತರಣೆ
ಈಗ ಇರುವ 185 ಇಂದಿರಾ ಕ್ಯಾಂಟೀನ್ ಜೊತೆಗೆ ಹೊಸ 52 ಕ್ಯಾಂಟೀನ್
ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಎರಡು ಆಂಬ್ಯುಲೆನ್ಸ್ ವ್ಯವಸ್ಥೆ
ನಮ್ಮ ಕ್ಲಿನಿಕ್ ಅಭಿವೃದ್ಧಿ ಹಾಗೂ ವೈದ್ಯರ ನೇಮಕ
ಪ್ರತಿ ವಲಯದಲ್ಲಿ ಹೈಟೆಕ್ ಅಸ್ಪತ್ರೆ ನಿರ್ಮಾಣ
ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ
ಪಾಲಿಕೆಯಲ್ಲಿ ವ್ಯಾಸಂಗ ಮಾಡುತ್ತಿರುವವರ ಮಕ್ಕಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕಾರ್ಡ್
ಪ್ರತಿ ಕ್ಷೇತ್ರದಲ್ಲಿ ಬೀದಿ ನಾಯಿಗಳಿಗೆ ಸೇರಿದಂತೆ ಇತರೆ ಪ್ರಾಣಿಗಳ ಚಿಕಿತ್ಸೆ ಗೆ ಪಶು ಅಸ್ಪತ್ರೆ ನಿರ್ಮಾಣ - ಘನತ್ಯಾಜ್ಯ ವಿಭಾಗ
ನಗರದ ನಾಲ್ಕು ಮೂಲೆಯಲ್ಲಿ ಕಸ ಸಂಸ್ಕರಣ ಘಟಕ ಸ್ಥಾಪನೆ
ಕಸ ವಿಲೇವಾರಿಗೆ ಹೊಸ ಟೆಂಡರ್ ಮೂಲಕ ಪ್ಯಾಕೇಜ್ ಸಿಸ್ಟಮ್
ನಗರದ 7 ಕಸ ಸಂಸ್ಕರಣ ಘಟಕಗಳಿಗೆ ಮರು ಜೀವ
ಮಹಾದೇವಪುರ, ಗೊಲ್ಲರಹಟ್ಟಿ ಬಳಿ ಬೆಂಗಳೂರು ಕಸ ವಿಲೇವಾರಿ ಗೆ ಜಾಗ ನಿಗದಿ
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಅನೇಕ ಕಲ್ಯಾಣ ಯೋಜನೆಗೆ ಅನುದಾನ
ಕೆಂಪೇಗೌಡ ಜಯಂತಿ, ಕರಗ ಮಹೋತ್ಸವ, ಅಂಬೇಡ್ಕರ್ ಜಯಂತಿಗೆ ಕೋಟಿ ಕೋಟಿ ಮೀಸಲು
ಪಾಲಿಕೆಯಿಂದ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ವಿವಿಧ ಬಗೆಯ ಉಚಿತ ಯೋಜನೆಗಳು
ಬಿಬಿಎಂಪಿ ಚುನಾವಣೆ ನಡೆದರೆ ಮೇಯರ್ ಹಾಗೂ ಉಪಮೇಯರ್ ವಿವೇಚನೆಗೆ 150 ಕೋಟಿ ರೂ. ಮೀಸಲು
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಪಾಲಿಕೆಯ ಎಲ್ಲ ಕಚೇರಿಗಳಿಗೆ ಹೈಟೆಕ್ ಸ್ಪರ್ಶ
ಪ್ರತಿ ಅಸ್ತಿ ಯನ್ನೂ ಡಿಜಿಟಲ್ ಕಾರಣ
ಹೊಸ ಜಾಹೀರಾತು ಕಾಯ್ದೆ ಜಾರಿ ಮಾಡಿ ವಾರ್ಷಿಕ 1 ಸಾವಿರ ಕೋಟಿ ರೂ. ಆದಾಯಕ್ಕೆ ನಿರ್ಧಾರ
ಪಾಲಿಕೆಯ ಎಲ್ಲಾ ವಾರ್ಡ್ ಗಳಿಗೂ ಕುಡಿಯುವ ನೀರಿನ ವ್ಯವಸ್ಥೆ
ಬೀದಿ ಬದಿಯ ವ್ಯಾಪಾರಿಗಳಿಗೆ ವ್ಯಾಪಾರದ ಗುರುತಿಸಿ ಚೀಟಿ ವಿತರಣೆ
ಇ ಖಾತ ವಿತರಣೆಗೆ ಹೆಚ್ಚಿನ ಒತ್ತು
ನಗರದ ಒಂದು ಕಡೆ ಪ್ರವಾಸಿ ತಾಣವಾಗಿಸಲು ಸ್ಕೈಡೆಕ್ ನಿರ್ಮಾಣ
ಬ್ರ್ಯಾಂಡ್ ಬೆಂಗಳೂರು-ಹಸಿರು ಬೆಂಗಳೂರು ಕಾರ್ಯಕ್ರಮ
ಮರಗಳ ಗಣತಿ, ಸಸಿ ನೆಡುವಿಕೆ
ಪೌರಕಾರ್ಮಿಕರಿಗೆ ನೇಮಕಾತಿ ಅದೇಶ ನೀಡುವುದು
ಮಹಿಳೆಯರು ಸುರಕ್ಷತೆಗೆ ಪೊಲೀಸ್ ಇಲಾಖೆ ಜೊತೆ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ
ನಗರದ ಟ್ರಾಫಿಕ್ ಕಂಟ್ರೋಲ್ ಗೆ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಹೊಸ ರಸ್ತೆ ನಿರ್ಮಾಣ
ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಟನಲ್ ರಸ್ತೆ ನಿರ್ಮಾಣ
ರಾಜಕಾಲುವೆ ಬಫರ್ ಜೊನ್ ನಲ್ಲಿ ರಸ್ತೆ ನಿರ್ಮಾಣ
ಅದಾಯ ಕ್ರೋಡೀಕರಿಸಿ ಪಾಲಿಕೆ ಲೀಸ್ ಜಾಗವನ್ನು ಮಾರುಕಟ್ಟೆ ದರದಲ್ಲಿ ಮಾರಾಟ