ನಿರ್ಮಾಪಕ ಕನಕಪುರ ಶ್ರೀನಿವಾಸ್ ಕೆಲ ದಿನಗಳ ಹಿಂದಷ್ಟೆ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ವೀರಾವೇಷದಿಂದ ಮಾತನಾಡಿದ್ದರು. ಚಿತ್ರರಂಗದಲ್ಲಿ ಇರುವವರೆಲ್ಲರೂ ತಮಗೆ ಮೋಸ ಮಾಡಿದ್ದಾರೆ, ತಮ್ಮನ್ನು ಹೊರತಾಗಿ ಚಿತ್ರರಂಗದಲ್ಲಿರುವವರೆಲ್ಲ ದುರುಳರು ಎಂಬ ರೀತಿ ಮಾತನಾಡಿದ್ದರು. ಪ್ರೇಮ್, ಅರ್ಜುನ್ ಜನ್ಯಾ ಇನ್ನೂ ಕೆಲವರ ಹೆಸರು ಹೇಳಿ ಕೆಲವು ಆರೋಪಗಳನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡಿದ್ದರು.
ಇದೀಗ ನಿರ್ದೇಶಕ ಪ್ರೇಮ್ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ. ಖುದ್ದಾಗಿ ಫಿಲಂ ಚೇಂಬರ್ಗೆ ಆಗಮಿಸಿದ ನಿರ್ದೇಶಕ ಪ್ರೇಮ್, ನೂತನ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿ ಆಗಿ ಕನಕಪುರ ಶ್ರೀನಿವಾಸ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ಪ್ರೇಮ್ ಹೇಳಿದ್ದೇನು?
ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ತುಂಬಾ ವರ್ಸ್ಟ್ ಆಗಿ ಮಾತಾಡಿದ್ದಾರೆ. ಅವ್ರು ಅಮ್ಮನಿಗೆ ಹುಟ್ಟಿಲ್ವಾ ಅಮ್ಮ..? ಅವ್ರು ಮಾತಾಡಿರುವುದು ತುಂಬ ನೋವಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಎನ್ ಸಿಆರ್ ದಾಖಲಾಗಿದೆ. ಫಿಲ್ಮ್ ಚೇಂಬರ್ ಗೂ ದೂರು ನೀಡಿದ್ದೇನೆ. ತಾಯಂದಿರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಎಜುಕೇಶನ್ ಇಲ್ಲದೆ ಇರುವ ಹಾಗೇ ಮಾತನಾಡಿದ್ದಾರೆ. ಅವ್ರು ಮಾತನಾಡಿದ ಹಾಗೆ ನಮಗೂ ಮಾತನಾಡಲು ಬರುತ್ತದೆ. ಆದರೆ ನಾನು ಅವರ ಕೀಳುಮಟ್ಟಕ್ಕೆ ಇಳಿಯಲ್ಲ. ಮಾನಹಾನಿ ಕೇಸ್ ಹಾಕ್ತೇನೆ. ಎಷ್ಟು ಕೋಟಿಗೆ ಅಂತಾ ನಮ್ಮ ವಕೀಲರು ಹೇಳ್ತಾರೆ. ಪುನೀತ್ ಅವರ ಜೊತೆಗೆ ಪಿಚ್ಚರ್ ಮಾಡಲು 9 ಲಕ್ಷ ನನ್ನಗೆ ಅಡ್ವಾನ್ಸ್ ಕೊಟ್ಟಿದ್ರು. ಆದರೆ ಅವರು ವಾಪಸ್ ಬರಲೇ ಇಲ್ಲ. ನಂತರ ಸಾರಾ ಗೋವಿಂದ್ ಅವರ ಅದ್ಯಕ್ಷತೆಯಲ್ಲಿ ಹಣ ವಾಪಸ್ ನೀಡಿದ್ದೇನೆ. ಆದರೂ ಈಗ ಮತ್ತೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದಿದ್ದಾರೆ ಪ್ರೇಮ್.
ಕನಕಪುರ ಶ್ರೀನಿವಾಸ್ ಹೇಳಿದ್ದೇನು?
ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಿರ್ಮಾಪಕ ಶ್ರೀನಿವಾಸ್, ಪ್ರೇಮ್ ಹಣ ಪಡೆದು ಸಿನಿಮಾ ಮಾಡಿಕೊಡದೆ ವಂಚಿಸಿದ್ದಾರೆ ಎಂಬರ್ಥದ ಮಾತುಗಳನ್ನಾಡಿದ್ದರು. ಪ್ರೇಮ್ ಜೊತೆಗೆ ಸಿನಿಮಾ ಮಾಡಿದವರೆಲ್ಲ ಹಣ ಕಳೆದುಕೊಂಡಿದ್ದಾರೆ ಆದರೆ ಪ್ರೇಮ್ ಮಾತ್ರ ಚೆನ್ನಾಗಿದ್ದಾರೆ ಎಂದಿದ್ದರು. ಇದೇ ಕಾರಣಕ್ಕೆ ಇದೀಗ ಪ್ರೇಮ್ ಅವರು ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿ : 54 ನಿಗಮ ಮಂಡಳಿ ಅಧ್ಯಕ್ಷರಿಗೆ ಬಂಪರ್ | ಕ್ಯಾಬಿನೆಟ್ ರ್‍ಯಾಂಕ್.. ಫುಲ್ ಸವಲತ್ತು – ಸರ್ಕಾರ ಆದೇಶ



















