ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ 24ನೇ ಅವಧಿಗೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ನಾಮಿನೇಷನ್ ಪೂರ್ಣಗೊಂಡಿದೆ. ಕೋರ ಕಮಿಟಿ ಸಭೆಯಲ್ಲಿ ನಿರ್ಣಯಿಸಿ ನೇಕಾರ ಸಮಾಜದ ಪ್ರೀತಿ ಕಾಮಕರ್ ಮೇಯರ್ ಮತ್ತು ಲಿಂಗಾಯತ ಸಮಾಜದ ಹನುಮಂತ ಕೊಂಗಾಲಿ ಉಪಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಶಾಸಕ ಅಭಯ್ ಪಾಟೀಲ ಅವರು ತಿಳಿಸಿದಂತೆ, ನಾಲ್ಕನೇ ಅವಧಿಗೆ ಮಹಾಪೌರ ಮತ್ತು ಉಪಮಹಾಪೌರ ಸ್ಥಾನಗಳಿಗೆ ಪಕ್ಷದ ನಿರ್ಧಾರದಂತೆ ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ನೇಕಾರ ಸಮಾಜದ ಸದಸ್ಯರು ಮೇಯರ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಈ ಮೂಲಕ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಪ್ರತಿನಿಧಿತ್ವ ಹಾಗೂ ಪಕ್ಷದ ನಿರ್ಣಯದಂತೆ ಮೇಯರ್, ಉಪಮೇಯರ್ ಸ್ಥಾನಗಳಿಗೆ ಅಧಿಕಾರಿಗಳು ನಿಗದಿಯಾದರು.
ಇದನ್ನೂ ಓದಿ : ಶಾಸಕರ ವಿರುದ್ಧ ಅಶ್ಲೀಲ ಪದ ಬಳಕೆ.. FIR ದಾಖಲು



















