ಬೆಂಗಳೂರು: ಪ್ರೀತ್ಸೆ…ಪ್ರೀತ್ಸೆ..ಅಂತಾ ಹುಡುಗಿಯ ಹಿಂದೆ ಬಿದ್ದವರಿಗೆ ಒದೆ ನೀಡಿರುವ ಘಟನೆಯೊಂದು ನಡೆದಿದ್ದು, ಈ ಕುರಿತು ಎಫ್ ಐಆರ್ ದಾಖಲಾಗಿದೆ.
ತಪ್ಪಾಯ್ತು, ಕೈ ಮುಗಿಯುತ್ತೇವೆ ಬಿಡಿ ಎಂದರೂ ಅಪ್ರಾಪ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆ ಮಾ. 17ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕರನ್ನು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದ ಬಾಲಕರು ಎಸ್ಸೆಸ್ಸೆಲ್ಸಿ ಓದುತ್ತಿದ್ದರು ಎನ್ನಲಾಗಿದೆ. ಹಲ್ಲೆಯಿಂದಾಗಿ ಇಬ್ಬರು ವಿದ್ಯಾರ್ಥಿಗಳ ಕೈ, ಕತ್ತಿನ ಭಾಗಕ್ಕೆ ಗಾಯಗಳಾಗಿವೆ. ಸದ್ಯ ಬಾಲಕರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಐದು ಜನರ ವಿರುದ್ಧ ಹಲ್ಲೆ ಮಾಡಿರುವ ಆರೋಪ ದಾಖಲಾಗಿದೆ. ಸುಫಿಯಾನ್, ಜುಬೇರ್ ಸೇರಿದಂತೆ ಮೂವರು ಅಪರಿಚಿತರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಹಲ್ಲೆಗೊಳಗಾಗಿರುವ 17 ವರ್ಷದ ಬಾಲಕನ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಹಲ್ಲೆಗೊಳಗಾದ ಇಬ್ಬರು ಅಪ್ರಾಪ್ತರು, ತಮ್ಮದೇ ವಯಸ್ಸಿನ ಹುಡುಗಿಯ ಹಿಂದೆ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದರು ಎನ್ನಲಾಗಿದ್ದು, ಬಾಲಕಿಯ ಮನೆಯವರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.