ಬೆಂಗಳೂರು : ನಟ ದರ್ಶನ್ ವಿರುದ್ಧ ನಟ ಪ್ರಥಮ್ ಮತ್ತೆ ಕಿಡಿಕಾರಿದ್ದಾರೆ. ಡಿ ಕಂಪನಿ ಅದೊಂದು ಡುಬಾಕ್ ಕಂಪನಿ. ದರ್ಬೇಸಿಗಳ ಕಂಪನಿ ಅಂತಾ ಹೆಸರಿಟ್ಕೊಳ್ಳಿ ಎಂದು ದರ್ಶನ್ ಫ್ಯಾನ್ಸ್ ವಿರುದ್ಧ ಒಳ್ಳೆ ಹುಡ್ಗ ಪ್ರಥಮ್ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ, ಇಂಟರ್‌ಪೋಲ್, ಸೈಬರ್ ಕ್ರೈಮ್, ಇಂಟಲಿಜೆನ್ಸ್ ಇವೆಲ್ಲಾ ದೇಶದ ಬಹಳ ದೊಡ್ಡ ಬೇಹುಗಾರಿಗೆ ಕಂಪನಿಗಳು. ಇವನ್ನೆಲ್ಲಾ ಮುಚ್ಚಿ ಎಲ್ಲಾ ಕೇಸ್‌ಗಳನ್ನು ಆ ʼಡಿʼ-ಕಂಪನಿ, ಡುಬಾಕ್ ಕಂಪನಿಗೆ ಕೊಡಿ. ಪರಿಹರಿಸುತ್ತಾರೆ. ಅವತ್ತು ದೊಡ್ಡಬಳ್ಳಾಪುರದಲ್ಲಿ ನಾನು ರೌಡಿಗಳ ಬಳಿ ಚಿಪ್ಸು-ಪಪ್ಸ್ ತಿನ್ನೋಕೆ ಹೋಗಿದ್ದನಂತೆ. ಸುಮ್ನೆ ತಪ್ಪು ಮಾಹಿತಿ ಹಬ್ಬಿಸಬೇಡಿ. ಮೊದಲು ಶಿಕ್ಷಣ ಮುಖ್ಯ. ಸುಮ್ಮನಿದ್ದು ನಿಮ್ಮ ಅಮ್ಮ-ಅಪ್ಪನಿಗೆ ದುಡಿದು ತಂದು ಸಾಕಿ ಎಂದು ಕಿಡಿಕಾರಿದ್ದಾರೆ.

ಈ ಡುಬಾಕ್ ಕಂಪನಿಯ ಇಂಟಲಿಜೆನ್ಸ್ ಪ್ರಕಾರ ಇನ್ವೇಸ್ಟಿಗೇಷನ್ ಮಾಡಿ ಹೇಳಿದ್ದರಂತೆ. ಅಂದು ಹಲ್ಲೆ ಮಾಡುವುದಕ್ಕೆ ಚಿಪ್ಸು-ಪಪ್ಸು ಮ್ಯಾಟರಂತೆ. ಜೊತೆಗೆ ಅಲ್ಲಿರುವವರು ದರ್ಶನ್ ಫ್ಯಾನ್ಸ್ ಅಲ್ವಂತೆ ಅಂತ ಹೇಳುತ್ತಿದ್ದಾರೆ. ಸುಮ್ಮನೇ ಡಿ-ಕಂಪನಿ ಎಂದು ಹೆಸರಿಡಗಡುಕೊಂಡು ಪುಂಡಾಟ ಮಾಡುತ್ತಾರೆ. ಅಲ್ಲಿ ಏನಾಯಿತೆಂದು ಎಸ್‌ಪಿಯವರು ಹೇಳುತ್ತಾರೆ. ನಿಮಗೆ ಒಂದು ಚೂರಾದರೂ ಬುದ್ಧಿ ಇದ್ದರೆ, ತಪ್ಪು ಮ್ಯಾಟರ್ ಹಬ್ಬಿಸುವುದನ್ನು ಬಿಡಿ. ನಾನು ಅಲ್ಲೇನೂ ಚಿಪ್ಸು ತಿನ್ನುವುದಕ್ಕೆ ಹೋಗಿರಲಿಲ್ಲ ಎಂದು ಸೆಲ್ಫಿ ವಿಡಿಯೋ ಮಾಡಿ ದರ್ಶನ್ ಫ್ಯಾನ್ ಪೇಜ್ ವಿರುದ್ಧ ಪ್ರಥಮ್ ಕೆಂಡ ಕಾರಿದ್ದಾರೆ.
ಒಟ್ಟಾರೆ, ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ, ಪ್ರಥಮ್ ಸೇರಿದಂತೆ ಕೆಲ ನಟರು ಕಿಡಿಕಾರುತ್ತಿದ್ದರೆ, ಇತ್ತ, ದರ್ಶನ್ ಮಾತ್ರ ಮೌನ ವಹಿಸಿರುವುದು ಮಾತ್ರ ಕೂತೂಹಲ ಕೆರಳಿಸಿದೆ.

















