ಮೈಸೂರು: ನಾನು ಕೂಡ ದರ್ಶನ್ ಅಭಿಮಾನಿ. ಕನ್ನಡದಲ್ಲಿ ಅತೀ ಹೆಚ್ಚು ಫ್ಯಾನ್ಸ್ ಇರುವುದು ಒನ್ ಅಂಡ್ ಓನ್ಲಿ ದರ್ಶನ್‌ಗೆ ಮಾತ್ರ ಎಂದು ನಟ ದರ್ಶನ್ ನಟನೆಯ ಡೆವಿಲ್ ಚಿತ್ರದ ಪೋಸ್ಟರ್‌ನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಬಿಡುಗಡೆ ಮಾಡಿದ್ದಾರೆ.
ಮೈಸೂರಿನಲ್ಲಿ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಡೆವಿಲ್’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಪ್ರತಾಪ್ ಸಿಂಹ, ಕನ್ನಡದಲ್ಲಿ ಸಾಕಷ್ಟು ನಟರು ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ. ಆದರೆ ಅತೀ ಹೆಚ್ಚು ಫ್ಯಾನ್ಸ್ ಇರುವುದು ಒನ್ ಅಂಡ್ ಓನ್ಲಿ ದರ್ಶನ್‌ಗೆ ಮಾತ್ರ. ನಾನು ಮೆಜೆಸ್ಟಿಕ್, ಕರಿಯ ಆ ಕಾಲದ ಸಿನಿಮಾಗಳನ್ನು ನೋಡುತ್ತಾ ಬಂದಿದ್ದೇನೆ. ಕೆಂಚಾಲೋ ಮಂಚಾಲೋ ಸಾಂಗ್ ಕ್ರೇಜ್ ಹುಟ್ಟಿಸಿತ್ತು. ಆ ಕಾಲದಿಂದಲೂ ನಾನು ದರ್ಶನ್ ಅಭಿಮಾನಿ ಕನ್ನಡ ಚಿತ್ರರಂಗದಲ್ಲಿದ್ದು, ಕನ್ನಡ ಚಿತ್ರದ ಬೆಳವಣಿಗೆಗೆ ದೊಡ್ಡ ಕಾಂಟ್ರ್ಯೂಬುಷನ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಡೆವಿಲ್ ಸಿನಿಮಾ ಡಿ.12ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ 11ಕ್ಕೆ ರಿಲೀಸ್ ಆಗುತ್ತಿದೆ. ಕನ್ನಡ ಜನರ ಪ್ರೀತಿ ಸಿನಿಮಾವನ್ನು ಗೆಲ್ಲಿಸಲಿ. ತಾಯಿ ಚಾಮುಂಡೇಶ್ವರಿಯ ಕೃಪೆ ದರ್ಶನ್ ಮೇಲಿರಲಿ. ಈ ಸಿನಿಮಾ ಅಧ್ಬುತ ಯಶಸ್ಸು ಕಾಣಲಿ ಎಂದು ಡೆವಿಲ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಮೆಡಿಕಲ್ ಬೀಗ ಮುರಿದು ರಾಬರಿ | ಖತರ್ನಾಕ್ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ



















