ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ ಟಿಆರ್ ಕಾಂಬಿನೇಶನ್ ನ ಹೊಸ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.
ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಾ ಮೂವಿ ಮೇಕರ್ಸ್ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್ ಗೆ ಅಂತಿಮವಾಗಿ ಮುಹೂರ್ತ ನಿಗದಿಯಾಗಿದೆ. ನೀಲ್-ಎನ್ ಟಿಆರ್ ಜೊತೆಯಾಗಿರುವ ಮೊದಲ ಸಿನಿಮಾ ಮುಂದಿನ ವರ್ಷದ ಜೂನ್ 25ರಂದು ತೆರೆಗೆ ಬರಲಿದೆ. ಈ ಬಗ್ಗೆ ಫೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಈಗಾಗಲೇ ಕರ್ನಾಟಕದ ಕುಮಟಾ ಬಳಿ ಚಿತ್ರೀಕರಣದಲ್ಲಿ ತೊಡಗಿರುವ ಚಿತ್ರತಂಡ ಮುಂದಿನ ವರ್ಷ ಸಿನಿಮಾ ಬಿಡುಗಡೆಗೆ ಪ್ಲ್ಯಾನ್ ಮಾಡಿಕೊಂಡಿದೆ.



















