ಬೆಂಗಳೂರು: ಬಹುಭಾಷಾ ನಟ ಮತ್ತು ರಾಜಕಾರಣಿ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ (85) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನಿನ್ನೆ ಬೆಳಗ್ಗೆ ಸ್ವರ್ಣಲತಾ ನಿಧನರಾದ ನಂತರ, ಪಾರ್ಥೀವ ಶರೀರವನ್ನು ಇಂದು ಬೆಳಗಿನ ಜಾವ ಹೈದರಾಬಾದ್ ನಿಂದ ಬೆಂಗಳೂರಿಗೆ ತರಲಾಗಿದೆ. ಅಂತಿಮ ವಿಧಿವಿಧಾನ ಶಾಂತಿನಗರದ ಸೆಂಟ್ ಮೈಕಲ್ ಚರ್ಚ್ ನಲ್ಲಿ ನೆರವೇರಲಿದ್ದು, ನಂತರ ಆಡುಗೋಡಿ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.
ಅಜ್ಜಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಮಗನನ್ನು ಪ್ರಕಾಶ್ ರಾಜ್ ಸಮಧಾನ ಮೂಡುತ್ತಿರುವ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ :ಕೌಟುಂಬಿಕ ಕಲಹ -ಗೃಹಿಣಿ ಆತ್ಮಹತ್ಯೆ!



















