. “ಪ್ರಕರಣ ತನಿಖಾ ಹಂತದಲ್ಲಿದೆ” ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ಹೊಸ ಹುಡುಗರ ತಂಡವೊಂದು ಇತ್ತೀಚಿನ ಕೆಲ ದಿನಗಳಿಂದ ಗಾಂಧಿ ನಗರದಲ್ಲಿ ಸಣ್ಣದಾಗಿ ಸದ್ದು ಮಾಡತೊಡಗಿದೆ.
ರಂಗ ಭೂಮಿ ಹಿನ್ನಲೆಯವರೇ ಹೆಚ್ಚಾಗಿರುವ, ಹೊಸ ತಂಡವೊಂದು ಕ್ರೈಂ-ಥ್ರಿಲ್ಲರ್ ಚಿತ್ರ ತಯಾರಿಸಿದ್ದು, ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದಿದೆ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು, ಕೂತೂಹಲಕಾರಿಯಾಗಿ ಕಾಣಿಸುತ್ತಿದೆ. ಚಿತ್ರದ ಮೇಲೊಂದು ನಿರೀಕ್ಷೆ ಇಡುವಂತೆ ಟ್ರೈಲರ್ ನೋಡಿಸಿಕೊಂಡಿದ್ದು, ಹೊಸ ತಂಡ ಭರವಸೆ ಮೂಡಿಸುತ್ತಿದೆ.

ಟ್ರೈಲರ್ ಬಿಡುಗಡೆಗಾಗಿ ಕರೆದಿದ್ದ ಇಂದಿನ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸುಂದರ್ ಎಸ್, ನಿರ್ಮಾಪಕ ಚಿಂತನ್ ಕಂಬಣ್ಣ, ಡಾ. ಶಿವಣ್ಣ, ಮಹಿನ್ ಕುಬೇರ್, ಮುತ್ತುರಾಜ್, ರಾಜ್ ಗಗನ್, ಎಡಿಟರ್ ನಾನಿಕೃಷ್ಣ, ವಿಎಫ್‌ಎಕ್ಸ್ ಮಾಡಿರುವ ಲಕ್ಷ್ಮೀಪತಿ ಎಂ.ಕೆ ಮೊದಲಾದವರು ಹಾಜರಿದ್ದರು.