ಬೆಂಗಳೂರು: ಅಶ್ಲೀಲ ಪೆನ್ ಡ್ರೈವ್ ಪ್ರಕರಣಕ್ಕೆ (Hassan Pen drive Video Case:) ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ (Prajwal revanna) ಎಸ್‌ಐಟಿ ಕಸ್ಟಡಿ ಅವಧಿ ಜೂ. 10ರ ವರೆಗೆ ವಿಸ್ತರಣೆಯಾಗಿದೆ.
ಎಸ್ ಐಟಿ ಕಸ್ಟಡಿ ಅವಧಿ ಇಂದಿಗೆ ಮುಗಿದಿದ್ದರಿಂದಾಗಿ ಪ್ರಜ್ವಲ್ ಅವರನ್ನು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಇನ್ನಷ್ಟು ವಿಚಾರಣೆ ನಡೆಸಬೇಕಿದೆ. ಹೀಗಾಗಿ ಅವರನ್ನು ಇನ್ನಷ್ಟು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಬೇಕೆಂದು ಎಸ್ಐಟಿ ಪರ ವಕೀಲರು ಮನವಿ ಮಾಡಿದರು. ಇದನ್ನು ಪರಿಗಣಿಸಿದ ಕೋರ್ಟ್, ಜೂ. 10ಗ ವರೆಗೆ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತು.
ವಿದೇಶದಲ್ಲಿದ್ದ ಸಂದರ್ಭದಲ್ಲಿ ಹಣ ಹೇಗೆ ಸಂದಾಯವಾಯಿತು ಎಂಬುವುದು ತಿಳಿದಿಲ್ಲ. ಮೊಬೈಲ್ ಬಗ್ಗೆಯೂ ಇನ್ನೂ ತನಿಖೆ ಆಗಬೇಕಿದೆ. ಕೆಲವು ಸಂತ್ರಸ್ತೆ, ಸಾಕ್ಚಿಗಳೊಂದಿಗೆ ಪ್ರಜ್ವಲ್ ನನ್ನು ಮುಖಾಮುಖಿ ಮಾಡಿಸಬೇಕಿದೆ. ತನಿಖೆಗೆ ಪ್ರಜ್ವಲ್ ಸಹಕರಿಸುತ್ತಿಲ್ಲ. ಹೀಗಾಗಿ ಸಮಯ ಸಾಕಾಗುತ್ತಿಲ್ಲ ಎಂದು ಎಸ್ ಐಟಿ ಮನವಿ ಮಾಡಿತು. ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದಿಸಿದರು.