ಬೆಂಗಳೂರು: ಸಂಸದ ಪಿ.ಸಿ. ಮೋಹನ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಮಧ್ಯೆ ಜಟಾಪಟಿ ಜೋರಾಗಿದ್ದು, ತಾರಕ್ಕೇರಿದೆ.
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೌಂಟರ್ ಕೊಟ್ಟಿದೆ. ಇದು ನಿಮ್ಮಪ್ಪನ ಕಾರ್ಯಕ್ರಮವಲ್ಲ ಎಂದು ಬಿಜೆಪಿ ವಿರುದ್ಧ ಪ್ರದೀಪ್ ಈಶ್ವರ್ ಹೇಳಿದ್ದಕ್ಕೆ ಬಿಜೆಪಿ ಟಾಂಗ್ ಕೊಟ್ಟಿದೆ. ಆಕ್ಸಿಡೆಂಟಲ್ ಎಂ.ಎಲ್.ಎ ಅವರೇ, ಅಲ್ಲಿ ನಡೆಯುತ್ತಿರುವುದು ಬಿಜೆಪಿ ಕಾರ್ಯಕ್ರಮವೂ ಅಲ್ಲ,
ಕಾಂಗ್ರೆಸ್ ಕಾರ್ಯಕ್ರಮವೂ ಅಲ್ಲ!! ಅಲ್ಲಿ ನಡೆಯುತ್ತಿರುವುದು ಪವಾಡ ಪುರುಷ ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮ!! ನಿಮಗೆ ಅಷ್ಟೊಂದು ಪ್ರಚಾರದ ಗೀಳಿದ್ದರೆ ಮಜಾ ಟಾಕೀಸ್ ಅಥವಾ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಹೋಗಿ! ನಿಮ್ಮ ಪ್ರಚಾರದ ಹಪಾಹಪಿಗಾಗಿ ಪೂಜನೀಯ ಕೈವಾರ ತಾತಯ್ಯ ಅವರ ವೇದಿಕೆಗೆ ಅವಮಾನಿಸಬೇಡಿ ಎಂದು ಕಿಡಿಕಾರಿದೆ.