ಬೆಂಗಳೂರು : ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜಾಲಹಳ್ಳಿ ವಿಭಾಗದ ಎನ್-9 ಉಪ ವಿಭಾಗದ ಹಲವೆಡೆ ನ.23, 24ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?
ವಿನಾಯಕ ನಗರ, ವಿಕಾಸ್ ನಗರ, ಶೋಭಾ ಅಪಾರ್ಟ್‌ಮೆಂಟ್, 8ನೇ ಮೈಲ್ ರಸ್ತೆ, ರಾಮಯ್ಯ ಲೇಔಟ್, ಹಾವನೂರು ಎಕ್ಸ್‌ಟಿಎನ್, ನಾರಾಯಣ ಲೇಔಟ್, ವಿಡಿಯಾ ಸ್ಕೂಲ್, ಕುವೆಂಪು ನಗರ, ವಿಡಿಯಾ ಬಸ್ ಸ್ಟಾಪ್, ರಿಲಯನ್ಸ್ ಫ್ರೆಶ್, ಮುನಿಕೊಂಡಪ್ಪ ಲೇಔಟ್, ಅಶೋಕ್ ನಗರ, ವಿದ್ಯಾ ನಗರ, ಡಿಫೆನ್ಸ್ ಕಾಲೋನಿ, ಮಂಜುನಾಥ್ ನಗರ, ಮಹಾಲಕ್ಷ್ಮಿ ನಗರ, ಕಾಟರಾಯ ನಗರ, ಸೋಪ್ ಫ್ಯಾಕ್ಟರಿ ಲೇಔಟ್, ವಿಜಯಲಕ್ಷ್ಮಿ ಲೇಔಟ್, ಅಂದಾನಪ್ಪ ಲೇಔಟ್ , ಬಿಟಿಎಸ್ ಲೇಔಟ್, ಸಿದ್ದೇಶ್ವರ ಲೇಔಟ್, ಸಾಸುವೆಘಟ್ಟ, ಸೋಲದೇವನಹಳ್ಳಿಯ ಭಾಗಶಃ, ತರಬನಹಳ್ಳಿ ಮುಖ್ಯ ರಸ್ತೆ, ಹೆಸರಘಟ್ಟ ಮುಖ್ಯ ರಸ್ತೆ, ಸಿಡೇದಹಳ್ಳಿ, ಭಾಗಶಃ ವಿಶ್ವೇಶರಯ್ಯ ಲೇಔಟ್, ರಾಯಲ್ ಎನ್‌ಕ್ಲೇವ್, ಬೈರವೇಶ್ವರ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪ್ರದೇಶಗಳಲ್ಲೂ ಕರೆಂಟ್ ಇರಲ್ಲ
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11 ಕೆವಿ ಯಲಹಂಕ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ನ.23ರಂದು ಭಾನುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4.30 ಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಕೆಎಂಎಫ್, ವೈಎನ್‌ಕೆ ನ್ಯೂ ಟೌನ್ 208, 407, ‘ಬಿ’ ಸೆಕ್ಟರ್, ಸಿಬಿ ಸಾಂದ್ರ, ಅಲ್ಲಾಳಸಂದ್ರ, ಶಾರದ ನಗರ, ಜನಪ್ರಿಯ, ಅನ್ರಿಯಾ, ಮಾರುತಿನಗರ, ಕೋಗಿಲು, ಬಿಬಿ ರಸ್ತೆ ಯಲಹಂಕ ಇತ್ಯಾದಿ. ಬಾಗಲೂರು ಕ್ರಾಸ್, ವೆಂಕಟಾಲ್, ನಿಟ್ಟೆ ಕಾಲೇಜು, ಬಿಎಸ್‌ಎಫ್, ಐಎಎಫ್, ಪಾಲನಹಳ್ಳಿ, ದ್ವಾರಕ ನಗರ ಇತ್ಯಾದಿ. ಪೂರ್ವಂಕರ RMZ ಗ್ಯಾಲೇರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಇದನ್ನೂ ಓದಿ : ISI ನಂಟು ಹೊಂದಿದ್ದ ಬೃಹತ್ ಶಸ್ತ್ರಾಸ್ತ್ರ ಜಾಲ ಭೇದಿಸಿದ ದೆಹಲಿ ಪೊಲೀಸರು | ನಾಲ್ವರ ಬಂಧನ



















