ಶಿಗ್ಗಾವಿ: ಅಧಿಕಾರ ನಶ್ವರ, ಮತದಾರನೇ ಈಶ್ವರ ಎಂದು ಡಿಕೆ ಶಿವಕುಮಾರ್ ಮತ ಯಾಚಿಸಿದ್ದಾರೆ.
ಶಿಗ್ಗಾಂವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬೊಮ್ಮಾಯಿಯನ್ನ 4 ಬಾರಿ ಆಯ್ಕೆ ಮಾಡಿದ್ರೂ ಕೂಡಾ ಇಲ್ಲಿ ಲೋಕಸಭಾ ಚುನಾವಣೆಯಲ್ಲಿ 8 ಸಾವಿರ ಅಂತರದಿಂದ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಜೈ ಅಂದಿದ್ದೀರಿ. ಈಗ ಅದೇ ರೀತಿಯ ಲೀಡ್ ನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡಿ ಎಂದು ಹೇಳಿದ್ದಾರೆ.
ಸೂರ್ಯ ಕೂಡಾ ಮೇಲಿಂದ ಕೆಳಗೆ ಬರುತ್ತಾನೆ. ಅಧಿಕಾರ ನಶ್ವರ, ಮತದಾರನೇ ಈಶ್ವರ ಎಂದು ನಿಮ್ಮ ಮುಂದೆ ಬಂದಿದ್ದೀವೆ ಪಠಾಣ್ ಅವರನ್ನು ಗೆಲ್ಲಿಸಿಕೊಡಿ, ನಾವು ನಿಮ್ಮ ಋಣ ತೀರಿಸುತ್ತೇವೆ ಎಂದು ಹೇಳಿದ್ದಾರೆ.