ಬೆಂಗಳೂರು : ಭೈರಸಂದ್ರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ರಿಂದ ಸಂಜೆ 5ರ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಬೆಸ್ಕಾಂ ಮಾಹಿತಿ ನೀಡಿದ್ದಾರೆ. 66/11 ಬ್ರಿಗೇಡ್ ಮೆಡೋಸ್ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ತ್ರೈಮಾಸಿಕ ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಈ ಕುರಿತಾಗಿ ಬೆಸ್ಕಾಂ ಮಾಹಿತಿ ನೀಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಎಲ್ಲೆಲ್ಲಿ ವಿದ್ಯುತ್ ಕಡಿತ?
ಭೈರಸಂದ್ರ, ಹೊಸಪಾಳ್ಯ, ಎಂ.ಎಲ್.ಎ ತೋಟ, ಬಂಜಾರಪಾಳ್ಯ, ಅಗರ, ಕರಡಿಗುಡ್ಡ, ಸಿದ್ದನಪಾಳ್ಯ, ಅಭಯ ಕಾಲೇಜ್, ವ್ಯಾಲಿ ಸ್ಕೂಲ್, ನವಿಲು ಮನೆ, ಸಾಲುದೊಡ್ಡಿ, ತಾತಗುಣಿ ಕಾಲೋನಿ, ಲಕ್ಷ್ಮೀಪುರ, ಸಾಲುದೊಡ್ಡಿ ಗೇಟ್, ನವಗ್ರಾಮ, ವಡೇರಹಳ್ಳಿ, ಚೌಡೇಶ್ವರಿ ನಗರ, ತಾತ ಗುಣಿ, ರಾಮಚಂದ್ರಪ್ಪ ಲೇಔಟ್, ಕಾವೇರಿ ನಗರ, ರಮೇಶ್ ನಗರ, ಸಾಲುಹುಣಸೆ.


















